ರಾಹುಲ್ ಅಲ್ಪಾವಧಿ ರಾಜಕಾರಣಿ: ನಕ್ವಿ
ರಾಜಧಾನಿ ದೆಹಲಿಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಇದು 'ಅಲ್ಪಾವಧಿ ರಾಜಕಾರಣಿ'ಯಿಂದ 'ಅಲ್ಪಾವಧಿ ರಾಜಕೀಯ ನಾಟಕ' ಎಂದು ಟೀಕಿಸಿದ್ದಾರೆ.
"ಇದು 'ಅಲ್ಪಾವಧಿ ರಾಜಕಾರಣಿ'ಯಿಂದ 'ಅಲ್ಪಾವಧಿ ರಾಜಕೀಯ ನಾಟಕ'. ಇದು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ನಡೆಸಿರುವ ಚಟುವಟಿಕೆಯಲ್ಲ. ನಾವು ಭಾರತೀಯ ಜನತಾ ಪಕ್ಷ ರಸ್ತೆ ಬದಿ ವ್ಯಾಪಾರಿಗಳು ಮತ್ತು ತಳ್ಳು ವ್ಯಾಪಾರಿಗಳ ಖಾಯಂ ಅಭಿವೃದ್ಧಿ ಮತ್ತು ಅಭ್ಯುಧಯಕ್ಕಾಗಿ ನೀತಿಗಳನ್ನು ಮಾಡಿದ್ದೇವೆ. ಅವರ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೇವೆ. ಅವರಿಗೆ ಈ ವಿಷಯಗಳು ತಿಳಿದಿಲ್ಲ, ಆದುದರಿಂದ ಅವರದ್ದು ಅಲ್ಪಾವಧಿ ರಾಜಕೀಯ ನಾಟಕ" ಎಂದು ನಕ್ವಿ ಹೇಳಿದ್ದಾರೆ.
ದೆಹಲಿಯ ರಘುಬೀರ್ ನಗರದಲ್ಲಿ ರಸ್ತೆಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಡಜನರನ್ನು ದೆಹಲಿಯಲ್ಲಿ ಕಡೆಗಣಿಸಲಾಗಿದೆ ಮತ್ತು ಅವರನ್ನು ಹೊರದಬ್ಬಲಾಗುತ್ತಿದೆ ಎಂದು ಆರೋಪಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜಯ್ ಮಾಕೆನ್ ಮತ್ತು ಪಿ ಸಿ ಚ್ಯಾಕೋ ರಾಹುಲ್ ಜೊತೆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


