ಪ್ರಧಾನ ಸುದ್ದಿ

ಲಖ್ವಿ ಧ್ವನಿ ಮಾದರಿ ನೀಡುವುದಿಲ್ಲ: ಪಾಕ್ ವಕೀಲರ ಸ್ಪಷ್ಟನೆ

26/11ರಂದು ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖ ಆರೋಪಿ ಝಕೀ ಉರ್ ರೆಹಮಾನ್ ಲಖ್ವಿ ಧ್ವನಿ ಮಾದರಿಯನ್ನು...

ಲಖ್ವಿ ಧ್ವನಿ ಮಾದರಿ ನೀಡುವುದಿಲ್ಲ: ಪಾಕ್  ವಕೀಲರ ಸ್ಪಷ್ಟನೆ
ಝಕೀ ಉರ್ ರೆಹಮಾನ್ ಲಖ್ವಿ
Published On :

ಇಸ್ಲಾಮಾಬಾದ್: 26/11ರಂದು ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖ ಆರೋಪಿ ಝಕೀ ಉರ್ ರೆಹಮಾನ್ ಲಖ್ವಿ ಧ್ವನಿ ಮಾದರಿಯನ್ನು ನೀಡೋದಿಲ್ಲ ಎಂದು ಪಾಕ್ ಮೂಲಗಳು ಸ್ಪಷ್ಟ ಪಡಿಸಿವೆ.
26/11ರಂದು ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಧ್ವನಿ ಮಾದರಿಯನ್ನು ವಿನಿಮಯ ಮಾಡಲು ಒಪ್ಪಿಕೊಂಡಿತ್ತು. ಈ ಬಗ್ಗೆ ಮೊನ್ನೆಯಷ್ಟೇ ರಷ್ಯಾದ ಉಫಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಸಮ್ಮತಿಸಿತ್ತು. ಆದರೆ ಇದೀಗ ಪ್ರಕರಣದ ಮಾಸ್ಟರ್ ಮೈಂಡ್ ಝಕೀ ಉರ್ ರಹಮಾನ್ ಲಖ್ವಿ ಧ್ವನಿ ಮಾದರಿಯನ್ನು ನೀಡೋದಿಲ್ಲ ಎಂಬ ಮಾತು ಕೇಳಿ ಬಂದಿದೆ.
ಹಿಂದೆಯೂ ನನ್ನ ಕಕ್ಷಿದಾರ ಲಖ್ವಿ ಧ್ವನಿ ಮಾದರಿ ನೀಡಿಲ್ಲ. ಮುಂದೇನೂ ಧ್ವನಿ ಮಾದರಿ ನೀಡೋದಕ್ಕೆ ನೀರಾಕರಿಸುತ್ತೇವೆ ಎಂದು ಪಾಕ್ ಭಯೋತ್ಪಾದಕ ಲಖ್ವಿ ಪರ ವಕೀಲರಿಂದ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಪಾಕಿಸ್ತಾನದ ಕಾನೂನಿನನ್ವಯ ಒಪ್ಪಿಗೆ ಇಲ್ಲದೇ ಧ್ವನಿ ಮಾದರಿ ಪಡೆಯುವುದಕ್ಕೆ ಸಾಧ್ಯವಿಲ್ಲ ಅಂತ ಕೂಡ ಹೇಳಿದ್ದಾರೆ. ನನ್ನ ಕಕ್ಷಿದಾರನಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜಾಮೀನು ಸಿಕ್ಕಿದೆ. ಹೀಗಾಗಿ ಅಗತ್ಯ ಬಿದ್ದರೆ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇವೆ. ಆದರೆ ಲಖ್ವಿಯ ಧ್ವನಿ ಮಾದರಿ ನೀಡೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಪಾಕಿಸ್ತಾನದಲ್ಲಿರುವ ಉಗ್ರ ಲಖ್ವಿಯ ಧ್ವನಿ ಮಾದರಿ ನೀಡುತ್ತೇವೆ ಎಂದು ಈ ಮುಂಚೆ ಪಾಕಿಸ್ತಾನ ಒಪ್ಪಿಕೊಂಡಿತ್ತು. ಉಗ್ರರರಿಗೆ ಲಖ್ವಿ ಕೆಲವು ನಿರ್ದೇಶನಗಳನ್ನು ನೀಡಿದ್ದ ಧ್ವನಿ ಮಾದರಿಗೂ, ಲಖ್ವಿಯ ಧ್ವನಿ ಮಾದರಿಗೂ ಹೋಲಿಕೆ ಮಾಡಿ ಈತನೇ ಆ ಕೃತ್ಯದ ಮಾಸ್ಟರ್ ಮೈಂಡ್ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನಾ ಕಲೆ ಹಾಕೋದಕ್ಕೆ ಸಹವಾಗುತ್ತಿತ್ತು. ಈಗಾಗಲೇ ಪಾಕಿಸ್ತಾನದಲ್ಲಿ ಇರುವಂತಹ ಲಖ್ವಿಯನ್ನಾ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನಿಗೆ ಜಾಮೀನು ಸಿಕ್ಕಿದೆ. ಆತ ಜಾಮೀನಿನ ಮೇಲೆ ಇದ್ದಾನೆ. ಈ ಹಿನ್ನಲೆಯಲ್ಲಿ ಲಖ್ವಿ ಪರ ವಕೀಲ ನಾವು ಅಗತ್ಯವಿದ್ದರೇ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಆದರೆ ಲಖ್ವಿ ಧ್ವನಿ ಮಾದರಿ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಪಾಕಿಸ್ತಾನದ ಕಾನೂನಿನ ಪ್ರಕಾರ ಒಪ್ಪಿಗೆ ಪಡೆದು ಧ್ವನಿ ಮಾದರಿ ಪಡೆಯಬೇಕು. ಧ್ವನಿ ಮಾದರಿ ನೀಡಲು ಲಖ್ವಿ ಒಪ್ಪಿಗೆ ಇಲ್ಲ ಎಂದು ವಕೀಲರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.