ಆಟೊ ಚಾಲಕ ನಿರಾಕರಿಸಿದ್ದಕ್ಕೆ, ಈ ಅಮೇರಿಕನ್ ಮಹಿಳೆ ಮಾಡಿದ್ದೇನು ಗೊತ್ತೇ?
ಆಟೋ ಚಾಲಕರು ಕರೆದ ಕಡೆ ಬರುವುದಿಲ್ಲ ಎಂಬುದು ಬಹು ದಿನದ ಬಹು ಜನರ ಕೂಗು. ಇದಕ್ಕೆ ಆಟೋ ಚಾಲಕರನ್ನು ದೂಷಿಸಬೇಕೆಂದೇನಲ್ಲ. ಅವರಿಗೂ ಕೆಲವು

ಆಟೋ ಚಾಲಕರು ಕರೆದ ಕಡೆ ಬರುವುದಿಲ್ಲ ಎಂಬುದು ಬಹು ದಿನದ ಬಹು ಜನರ ಕೂಗು. ಇದಕ್ಕೆ ಆಟೋ ಚಾಲಕರನ್ನು ದೂಷಿಸಬೇಕೆಂದೇನಲ್ಲ. ಅವರಿಗೂ ಕೆಲವು ಇತಿಮಿತಿಗಳಿರುತ್ತವೆ. ಆದರೆ ಅದನ್ನು ಮೀರಿ ಕೆಲವೊಮ್ಮೆ ಒರಟಾಗಿ, ಅನಾಗರಿಕವಾಗಿ ವರ್ತಿಸುವ ಆಟೊ ಚಾಲಕರನ್ನು ಕಂಡಾಗ ಪ್ರಯಾಣಿಕರಿಗೆ ಗಾಬರಿಯಾಗುವುದು ಖಂಡಿತಾ.
ಇಲ್ಲಿ ನೋಡಿ ಅಮೇರಿಕ ಮಹಿಳೆಯೊಬ್ಬಳಿಗೆ ಆಟೋ ಚಾಲಕ ಪ್ರಯಾಣ ನಿರಾಕರಿಸಿದ್ದಕ್ಕೆ ಅವರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆಟೋ ಚಾಲಕನ ಭಾಷೆಯಾದ ಹಿಂದಿಯಲ್ಲೇ ಮಾತನಾಡಿರುವ ಕ್ರಿಶ್ಚಿನ್ ಫೈರ್, ನಾನು ಪೂರ್ತಿ ದಿನ ಬಿಡುವಾಗಿದ್ದೇನೆ. ನೀವು ನಾನು ಕರೆದ ಕಡೆ ಬರಲು ನಿರಾಕರಿಸಿದರೆ ಇಡೀ ದಿನ ಇಲ್ಲೇ ಕೂರುತ್ತೇನೆ ಅಂದು ಆಟೋದಲ್ಲೇ ಕುಳಿತಿದ್ದಾರೆ.
ನಂತರ ಕೆಲವು ಬಾಲಿವುಡ್ ಹಾಡುಗಳನ್ನೂ ಈಕೆ ಹಾಡಿದ್ದಾರೆ. "ಭಾರತದಲ್ಲಿ ಮೀಟರ್ ಹಾಕಿ ನಾನು ಹೋಗಬೇಕಾದ ಜಾಗಕ್ಕೆ ಆಟೊ ಅಥವಾ ಟ್ಯಾಕ್ಸಿಯನ್ನು ಕೊಂಡೊಯ್ಯುವುದು ಹೇಗೆ ಎಂದು ತಿಳಿಯಲು ನನಗೆ ೨೦ ವರ್ಷ ಹಿಡಿಯಿತು" ಎಂದು ಅವರು ಯೂ ಟ್ಯೂಬ್ ನಲ್ಲಿ ಬರೆದು ಈ ಈ ವಿಡಿಯೋ ಹಾಕಿದ್ದಾರೆ.
ಇದಕ್ಕೆ ಖಾರವಾಗಿ ಕೆಲವರು ಪ್ರಕ್ರಿಯಿಸಿದ್ದು, ಯೂ ಟ್ಯೂಬ್ ನಲ್ಲಿ ಆಟೋ ಚಾಲಕನನ್ನು 'ಸ್ಕ್ರೌಂಡ್ರೆಲ್' ಎಂದು ಕರೆದಿರುವುದು ತಪ್ಪು ಮತ್ತು ಒಬ್ಬ ಬಡ ಆಟೋ ಚಾಲಕನನ್ನು ಅವಮಾನಿಸಿದ್ದೀರಿ ಎಂದು ಕೂಡ ಈ ಮಹಿಳೆಯನ್ನು ದೂಷಿಸಿದ್ದಾರೆ.
ಮುಂದಿನ ಬಾರಿ ಅಟೊ ಚಾಲಕ ನಿಮ್ಮನ್ನು ಕರೆದೊಯ್ಯಲು ನಿರಾಕರಿಸಿದರೆ ಏನು ಮಾಡಬಹುದು ಎಂದು ಈ ವಿಡಿಯೋ ನಿಮಗೆ ಹೇಳಿಕೊಡಬಹುದು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


