ಬಿಹಾರ ವಿಧಾನಸಭೆ ಚುನಾವಣೆ: ಕದ ತಟ್ಟಿ ನಿತೀಶ್ ಪ್ರಚಾರ
ಬಿಹಾರದ ಆಡಳಿತ ಪಕ್ಷ ಜನತಾದಳ (ಸಂಯುಕ್ತ) ಪ್ರತಿ ಮನೆಯ ಕದ ತಟ್ಟಿ ಪ್ರಚಾರ ನಡೆಸುವ ಅಭಿಯಾನವನ್ನು ಗುರುವಾರ ಪ್ರಾರಂಭಿಸಿದೆ

ಪಾಟ್ನಾ: ಬಿಹಾರದ ಆಡಳಿತ ಪಕ್ಷ ಜನತಾದಳ (ಸಂಯುಕ್ತ) ಪ್ರತಿ ಮನೆಯ ಕದ ತಟ್ಟಿ ಪ್ರಚಾರ ನಡೆಸುವ ಅಭಿಯಾನವನ್ನು ಗುರುವಾರ ಪ್ರಾರಂಭಿಸಿದೆ.
ಜೆಡಿಯು, ಆರ್ ಜೆ ಡಿ, ಕಾಂಗ್ರೆಸ್ ಮತ್ತು ಎನ್ ಸಿ ಪಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಈ ಅಭಿಯಾನ ಪ್ರಾರಂಭಿಸಿದ್ದಾರೆ. ಇದೇ ಸಮಯದಲ್ಲಿ ಬಿಹಾರದಾದ್ಯಂತ ೧೦೦೦೦ ಪ್ರದೇಶಗಳಲಿ ಜೆಡಿಯು ಕಾರ್ಯಕರ್ತರು ಮತ್ತು ಮುಖಂಡರು ಈ ಅಭಿಯಾನಕ್ಕೆ ಸಮಾನಾಂತರವಾಗಿ ಚಾಲನೆ ನೀಡಿದ್ದರೆ.
ಪಾಟ್ನಾದ ಸಾಹೇಬ್ ವಿಧಾನಸಭಾ ಕ್ಷೇತ್ರದಲ್ಲಿ ನಿತೀಶ್ ಕುಮಾರ್ ಅವರೇ ಖುದ್ದಾಗಿ ಮನೆಗಳ ಕದ ತಟ್ಟಿ ಪ್ರಚಾರ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ತಂತ್ರಗಾರಿಕೆ ಮಾಡುತ್ತಿದ್ದ ಪ್ರಶಾಂತ್ ಕಿಶೋರ್ ಅವರ ಕಲ್ಪನೆಯ ಕೂಸು ಈ ಮನೆಯಿಂದ ಮನೆಗೆ ಹೋಗಿ ಪ್ರಚಾರ ಮಾಡುವ ಅಭಿಯಾನ.
ಕಳೆದ ತಿಂಗಳು ನಿತೀಶ್ ಕುಮಾರ್ ಅವರು 'ಭಡ್ ಚಲಾ ಬಿಹಾರ್' (ಮುನ್ನುಗ್ಗುತ್ತಿರುವ ಬಿಹಾರ) ಅಭಿಯಾನಕ್ಕೂ ಚಾಲನೆ ನೀಡಿದ್ದರು. ಅದು ಕೂಡ ಪ್ರಶಾಂತ್ ಕಿಶೋರ್ ಅವರ ಕಲ್ಪನೆಯ ಕೂಸೆ. ಆದರೆ ಬಿಜೆಪಿ ಪಕ್ಷ ದೂರು ನೀಡಿದ್ದರಿಂದ ಚುನಾವಣೆ ಸಂಹಿಯೆಅನ್ನು ಉಲ್ಲಂಘಿಸುತ್ತಿರುವ ಆರೋಪದ ಮೇಲೆ ಆ ಅಭಿಯಾನಕ್ಕೆ ಚುನಾವಣಾ ಆಯೋಗ ತಡೆ ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


