ಪ್ರಧಾನ ಸುದ್ದಿ

ಶಾಕ್ ಹೊಡೆಯುವ ರಾಜಕಾರಣಿಗಳ ವಿದ್ಯುಚ್ಛಕ್ತಿ ಬಿಲ್ ಗಳು

ಇತ್ತೀಚೆಗಷ್ಟೇ ಮಾಹಿತಿ ಕಾಯ್ದೆ ಹಕ್ಕು ಕಾಯ್ದೆಯಡಿ ಸಲಿಸಿದ್ದ ಅರ್ಜಿಯಲ್ಲಿ ದೆಹಲಿ ಮುಖ್ಯಮಂತ್ರಿ ತಮ್ಮ ನಿವಾಸದಲ್ಲಿ ಉಪಯೋಗಿಸುವ ವಿದ್ಯುಚ್ಛಕ್ತಿ ಬಿಲ್ ವಿವರಗಳು

ಶಾಕ್ ಹೊಡೆಯುವ ರಾಜಕಾರಣಿಗಳ ವಿದ್ಯುಚ್ಛಕ್ತಿ ಬಿಲ್ ಗಳು
ಸಾಂದರ್ಭಿಕ ಚಿತ್ರ
Published On :

ಇತ್ತೀಚೆಗಷ್ಟೇ ಮಾಹಿತಿ ಕಾಯ್ದೆ ಹಕ್ಕು ಕಾಯ್ದೆಯಡಿ ಸಲಿಸಿದ್ದ ಅರ್ಜಿಯಲ್ಲಿ ದೆಹಲಿ ಮುಖ್ಯಮಂತ್ರಿ ತಮ್ಮ ನಿವಾಸದಲ್ಲಿ ಉಪಯೋಗಿಸುವ ವಿದ್ಯುಚ್ಛಕ್ತಿ ಬಿಲ್ ವಿವರಗಳು ತಿಳಿದಿದ್ದವು. ಅವರು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ೯೧೦೦೦ ರೂ ಕರಂಟ್ ಬಿಲ್ ಕಟ್ಟಿದ್ದರು ಎಂದು ಆರ್ ಟಿ ಐ ಪ್ರತಿಕ್ರಿಯೆ ತಿಳಿಸಿತ್ತು.

ಈಗ ದೆಹಲಿಯ ಇನ್ನಿತಿರ ಪ್ರಮುಖ ರಾಜಕಾರಣಿಗಳ ವಿದ್ಯುಚ್ಛಕ್ತಿ ಬಿಲ್ ನೋಡಿದರೆ ಶಾಕ್ ಹೊಡೆಯುವುದು ಖಚಿತ!

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯುಚ್ಛಕ್ತಿ ಬಿಲ್ ೨೧ ಲಕ್ಷ ಇದ್ದರೆ ಅರುಣ್ ಜೇಟ್ಲಿ ಅವರ ಮನೆಯ ವಿದುಚ್ಛಕ್ತಿ ಬಿಲ್ ಸುಮಾರು ೪ ಲಕ್ಷ ರೂ.

ಆದರೆ ಇವರ ಮನೆಯ ಕರಂಟ್ ಬಿಲ್ಲುಗಳು ಇಷ್ಟು ದೊಡ್ಡ ಮೊತ್ತ ಏಕೆ ಎಂಬುದು ತಿಳಿದಿಲ್ಲ. ಇದಕ್ಕೆ ಸಾರ್ವಜನಿಕರ ಹಣವನ್ನೇ ಉಪಯೋಗಿಸಲಾಗುತ್ತಿದೆಯೇ ಎಂಬುದನ್ನು ಕೂಡ ಧೃಢೀಕರಿಸಿಕೊಳ್ಳಬೇಕಿದೆ.

ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ವಿದ್ಯುಚ್ಚಕ್ತಿ ಬಿಲ್ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ದೆಹಲಿ ಸರ್ಕಾರ ಆ ಮೊತ್ತ ಅವರ ಕಚೇರಿ ಮತ್ತು ನಿವಾಸ ಎರಡನ್ನೂ ಸೇರಿಸಿದೆ. ಕೇಜ್ರಿವಾಲ್ ಅವರು ತಮ್ಮ ನಿವಾಸಕ್ಕೆ ತೆರಳಿದ್ದು ಮಾರ್ಚ್ ನಲ್ಲಿ. ಅಂದಿನಿಂದ ಮಾರ್ಚ್ ನಲ್ಲಿ ೧೭೦೦೦ರೂ, ಏಪ್ರಿಲ್ನಲ್ಲಿ ೭೩೭೦ರೂ ಮತ್ತು ಮೇನಲ್ಲಿ ೨೨೬೯೦ರೂ ವಿದ್ಯುಚ್ಚಕ್ತಿ ಬಿಲ್ ಪಾವತಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.