ಬಿಜೆಪಿ ಕ್ಷಮೆಯಾಚಿಸಲಿ: ಕೇಜ್ರಿವಾಲ್
ಅಣ್ಣಾ ಹಜಾರೆಯವರಿಗೆ ಅವಮಾನ ಮಾಡುವ ರೀತಿಯಲ್ಲಿ ಪಕ್ಷದ ಪ್ರಚಾರ ಜಾಹೀರಾತು ಪ್ರಕಟಿಸಿರುವ ಬಿಜೆಪಿ ಕ್ಷಮೆಯಾಚಿಸಲಿ...

ನವದೆಹಲಿ: ಅಣ್ಣಾ ಹಜಾರೆಯವರಿಗೆ ಅವಮಾನ ಮಾಡುವ ರೀತಿಯಲ್ಲಿ ಪಕ್ಷದ ಪ್ರಚಾರ ಜಾಹೀರಾತು ಪ್ರಕಟಿಸಿರುವ ಬಿಜೆಪಿ ಕ್ಷಮೆಯಾಚಿಸಲಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ಕಾಂಗ್ರೆಸ್‌ನ ಸಹಾಯದಿಂದ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿದ್ದನ್ನು ಅಪಹಾಸ್ಯ ಮಾಡಿ ಬಿಜೆಪಿ ಜಾಹೀರಾತು ಪ್ರಕಟಿಸಿತ್ತು. ಆ ಜಾಹೀರಾತಲ್ಲಿ ಅಣ್ಣಾ ಹಜಾರೆಯವರ ಫೋಟೋಗೆ ಹಾರ ಹಾಕಿ ಅದರ ಮುಂದೆ ಕೇಜ್ರಿವಾಲ್ ಮಕ್ಕಳ ತಲೆ ಮೇಲೆ ಕೈ ಇಟ್ಟು ಆಣೆ ಮಾಡುವ ಚಿತ್ರವನ್ನು ಬಿಡಿಸಲಾಗಿದೆ. ಅಧಿಕಾರಕ್ಕಾಗಿ ನಾನು ಏನು ಬೇಕಾದರೂ ಮಾಜಬಲ್ಲೆ ಎಂಬ ವಾಕ್ಯವನ್ನೂ ಅದರಲ್ಲಿ ಬರೆಯಲಾಗಿದೆ.
1948ರ ಇದೇ ದಿನ ನಾಥೂರಾಂ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆಗೈದಿದ್ದರು. ಇದೇ ದಿನ ಬಿಜೆಪಿ, ಅಣ್ಣಾ ಹಜಾರೆಯವರನ್ನು ಜಾಹೀರಾತು ಮೂಲಕ ಕೊಂದಿದೆ. ಇದಕ್ಕೆ ಬಿಜೆಪಿ ಕ್ಷಮೆ ಕೇಳಬೇಕಲ್ಲವೇ? ಎಂದು ಕೇಜ್ರಿವಾಲ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ನಾನು ಕೇಜ್ರಿವಾಲ್ ಮತ್ತು ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಆಕಾಂಕ್ಷಿ ಕಿರಣ್ ಬೇಡಿ ಬಗ್ಗೆಯೂ ಮಾತನಾಡಲು ಇಚ್ಛಿಸುವುದಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


