ಲಿಬಿಯಾ ಹೋಟೆಲ್ ಮೇಲೆ ದಾಳಿ; ೯ ಸಾವು; ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್
ಲಿಬಿಯಾದ ವೈಭವಯುತ ಕೋರಿಂತಿಯಾ ಹೋಟೆಲ್ ಗೆ ನುಗ್ಗಿದ ಐದು ಜನ ಸಶಸ್ತ್ರ ಬಂಧೂಕುದಾರಿಗಳು

ಟ್ರಿಪೋಲಿ: ಲಿಬಿಯಾದ ವೈಭವಯುತ ಕೋರಿಂತಿಯಾ ಹೋಟೆಲ್ ಗೆ ನುಗ್ಗಿದ ಐದು ಜನ ಸಶಸ್ತ್ರ ಬಂಧೂಕುದಾರಿಗಳು ನಡೆಸಿದ ಗುಂಡಿನ ದಾಳಿಗೆ ಮಂಗಳವಾರ ಕನಿಷ್ಟ ೫ ವಿದೇಶಿಯರು, ೩ ಜನ ಕಾವಲು ಪಡೆಯವರು ಹಾಗು ಒಬ್ಬ ಒತ್ತೆಯಾಳು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಈ ದಾಳಿಯ ವೇಳೆಯಲ್ಲಿ ಲಿಬಿಯದ ಸ್ವಘೋಷಿತ ಸರ್ಕಾರದ ಮುಖಂಡ ಒಮರ್ ಅಲ್ ಹಸ್ಸಿ ಅವರು ಕೂಡ ಹೋಟೆಲ್ ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಆದರೆ ಭದ್ರತಾ ಪಡೆಗಳು ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕೊಂಡೊಯ್ದಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಮಂಗಳವಾರ ತಡ ರಾತ್ರಿ ನಡೆದ ಈ ದಾಳಿಯಲ್ಲಿ, ಭದ್ರತಾ ಪಡೆ ಹೋಟೆಲ್ ಅನ್ನು ಸುತ್ತುವರೆದ ಮೇಲೆ ದಾಳಿಕೋರರಲ್ಲಿ ಮೂವರು ಸ್ಫೋಟಿಸಿಕೊಂಡಿದ್ದಾರೆ. ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


