ಮಾವೋವಾದಿಗಳಿಂದ ರೇಲ್ವೇ ಹಳಿ ಸ್ಫೋಟ
ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ...

ಒಡಿಶಾ: ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ನಡುವಿನ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿವ ಮುನಿಗುಂಡ ರೇಲ್ವೇ ಸ್ಟೇಷನ್ ಸಮೀಪದಲ್ಲಿರುವ ಮುನಿಖೋಲ್ ಎಂಬಲ್ಲಿ ಕಡಿಮೆ ತೀವ್ರತೆಯಿರುವ ಸ್ಫೋಟಕ ಬಳಸಿ ಮಾವೋವಾದಿಗಳು ಸ್ಫೋಟ ನಡೆಸಿದ್ದಾರೆ ಎಂದು ರಾಯ್‌ಗಡ ಎಸ್ಪಿ ಕೆ.ಸಿಬಾಸುಬ್ರಮಣಿ ಹೇಳಿದ್ದಾರೆ.
ಈ ಸ್ಫೋಟದಲ್ಲಿ ರೈಲ್ವೇ ಗ್ಯಾಂಗ್‌ಮೆನ್ ಹರಿ ಮಿರ್ದಾ ಅವರು ಗಾಯಗೊಂಡಿದ್ದಾರೆ ಎಂದು ರೈಲ್ವೇ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ.
ಬಾಂಬ್ ನಿಗ್ರಹ ದಳ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು ಮಾವೋವಾದಿಗಳೇ ಈ ಕೃತ್ಯವೆಸಗಿದ್ದಾರೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಕೆಸಿಂಗಾ, ಮುನಿಗುಂಡಾ ಮತ್ತು ರಾಯ್‌ಗಡ ರೈಲ್ವೇ ಸ್ಟೇಷನ್‌ನಲ್ಲಿ ಅರ್ಧ ಡಜನ್‌ನಷ್ಟು ರೈಲುಗಳನ್ನು ಸಂಚಾರ ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ.
ಭಾರತಕ್ಕೆ ಒಬಾಮಾ ಭೇಟಿ ನೀಡುವುದನ್ನು ವಿರೋಧಿಸಿ ಆ ಬಾಂಬ್ ಸ್ಫೋಟ ನಡೆಸಿದ್ದೇವೆ ಎಂದು ಹೇಳುವ ಬ್ಯಾನರ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು, ಸ್ಫೋಟದ ಹೊಣೆಯನ್ನು ಸಿಪಿಐ (ಮಾವೋವಾದಿ) ಸಂಘಟನೆ ಹೊತ್ತುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


