ಪ್ರಧಾನ ಸುದ್ದಿ

ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್ ಬೇಡಿ, ಆಯ್ಕೆ ಸಮರ್ಥಿಸಿಕೊಂಡ ಅಮಿತ್ ಷಾ

ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲಲು ಕಿರಣ್ ಬೇಡಿ ಅವರನ್ನು ಎರವಲು ಪಡೆಯಲಾಗಿದೆ ಹಾಗೂ

ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್ ಬೇಡಿ, ಆಯ್ಕೆ ಸಮರ್ಥಿಸಿಕೊಂಡ ಅಮಿತ್ ಷಾ
ಅಮಿತ್ ಷಾ ಮತ್ತು ಕಿರಣ್ ಬೇಡಿ
Published On :

ಪಾಟ್ನಾ: ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲಲು ಕಿರಣ್ ಬೇಡಿ ಅವರನ್ನು ಎರವಲು ಪಡೆಯಲಾಗಿದೆ ಹಾಗೂ 'ಭ್ರಷ್ಟಾಚಾರದ ವಿರುದ್ಧ ಭಾರತ' ಚಳವಳಿಯಲ್ಲಿ ಕೇಸರಿ ಪಕ್ಷದ ವಿರುದ್ಧ ಆರೋಪ ಮಾಡದಂತೆ ಅಣ್ಣಾ ಹಜಾರೆ ಅವರಿಗೆ ಕಿರಣ್ ಬೇಡಿ ಹೇಳಿದ್ದರು ಎಂಬ ವಿವಾದಗಳನ್ನು ಬಿಜೆಪಿ ಅಲ್ಲಗೆಳೆದಿದೆ.

"ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿ ಪಕ್ಷದ ಒಲವು. ಕಿರಣ್ ಬೇಡಿ ಅಂತಹ ಒಂದು ಉದಾಹರಣೆ" ಎಂದು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವರದಿಗಾರರಿಗೆ ತಿಳಿಸಿದ್ದಾರೆ.

'ಭ್ರಷ್ಟಾಚಾರದ ವಿರುದ್ಧ ಭಾರತ' ಚಳವಳಿಯಲ್ಲಿ ಕೇಸರಿ ಪಕ್ಷದ ವಿರುದ್ಧ ಆರೋಪ ಮಾಡದಂತೆ ಅಣ್ಣಾ ಹಜಾರೆ ಅವರಿಗೆ ಕಿರಣ್ ಬೇಡಿ ಹೇಳಿದ್ದರು ಎಂಬ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, 'ಭ್ರಷ್ಟಾಚಾರದ ವಿರುದ್ಧ ಭಾರತ' ಆಮ್ ಆದ್ಮಿ ಪಕ್ಷವಾಗಿರಲಿಲ್ಲ ಎಂದಿದ್ದಾರೆ ಷಾ.

ಕಿರಣ್ ಬೇಡಿಯವರನ್ನು ಪ್ರಶಂಸಿಸಿರುವ ಷಾ "ತನ್ನ ಜೀವನಪೂರ್ತಿ ಭ್ರಷ್ಟಾಚಾರದ ವಿರುದ್ಧ ಹೋರಾಡಿರುವ ಧೀಮಂತ ಪೊಲೀಸ್ ಅಧಿಕಾರಿ ಅವರು" ಎಂದಿದ್ದಾರೆ.

"ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಕೆಲಸ ಅವರು ಮಾಡಿರುವುದರಿಂದ ದೆಹಲಿಯ ಮಹಿಳೆಯರು ಅವರ ಜೊತೆಗಿದ್ದಾರೆ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.