ಪ್ರಧಾನ ಸುದ್ದಿ

ಹಂದಿ ಜ್ವರಕ್ಕೆ 3 ಮಂದಿ ಬಲಿ

ವಿಭಜಿತ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಹಂದಿ ಜ್ವರ ಕಾಣಿಸಿಕೊಂಡಿದ್ದು, ಮಾರಕ ರೋಗಕ್ಕೆ...

ಹಂದಿ ಜ್ವರಕ್ಕೆ 3 ಮಂದಿ ಬಲಿ
ಹೈದರಾಬಾದ್ ನಲ್ಲಿ ಹಂದಿ ಜ್ವರಕ್ಕೆ ಮೂವರು ಬಲಿ
Published On :

ಹೈದರಾಬಾದ್: ವಿಭಜಿತ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಹಂದಿ ಜ್ವರ ಕಾಣಿಸಿಕೊಂಡಿದ್ದು, ಮಾರಕ ರೋಗಕ್ಕೆ ಬುಧವಾರ ಮೂವರು ಬಲಿಯಾಗಿದ್ದಾರೆ.

ಸಾವನ್ನಪ್ಪಿದ್ದ ಮೂವರೂ ಕಳೆದ ಹಲವು ದಿನಗಳಿಂದ ರೋಗಕ್ಕೆ ತುತ್ತಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಇಬ್ಬರು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೊಬ್ಬ ವ್ಯಕ್ತಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಂದು ಮೂವರೂ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶದ 8 ಮಂದಿ ಹಂದಿ ಜ್ವರಕ್ಕೆ ಬಲಿಯಾಗಿದ್ದರು.ಈಗಾಗಲೇ ಪರೀಕ್ಷೆಗೊಳಪಟ್ಟವರ ಪೈಕಿ 185ಕ್ಕೂ ಹೆಚ್ಚು ಮಂದಿಯಲ್ಲಿ ಹಂದಿ ಜ್ವರದ ಸೋಂಕು ಪತ್ತೆಯಾಗಿದೆ.

ತಮಿಳುನಾಡಿನ ಚೆನ್ನೈ ಆಸ್ಪತ್ರೆಯೊಂದರಲ್ಲಿ ಮೇ.16 2009ರಲ್ಲಿ ಮೊದಲ ಹಂದಿಜ್ವರ ಪ್ರಕರಣ ಪತ್ತೆಯಾಗಿತ್ತು.  ನಂತರ ಇದರ ಸೋಂಕು ದೇಶದಾದ್ಯಂತ ಹರಡಲು ಪ್ರಾರಂಭಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶದ 8 ಮಂದಿ ಈ ರೋಗಕ್ಕೆ ಬಲಿಯಾಗಿದ್ದರು.

ಹಂದಿ ಜ್ವರ ಎಂಬ ಮಾರಕ ರೋಗ ಕಳೆದ ನಾಲ್ಕು ವರ್ಷಗಳಿಂದ ದೇಶದಾದ್ಯಂತ ಕಾಡುತ್ತಾ ಅನೇಕರನ್ನು ಬಲೆ ತೆಗೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಎಚ್1ಎನ್1 ಆತಂಕ ಅಧಿಕೃತವಾಗಿ ದೂರವಾಗಿದೆ ಎಂದು 2010ರಂದು ಘೋಷಿಸಿತ್ತು. ಆದಾಗ್ಯೂ ಹಂದಿಜ್ವರ ಎಂಬ ಮಾರಿ ಮತ್ತೆ ಕಾಣಿಸಿಕೊಂಡಿದ್ದು, ದೇಶಾದ್ಯಂತ ಸಾವಿನ ಸಂಖ್ಯೆ ಏರುವಂತೆ ಮಾಡುತ್ತಿದೆ. ಚಳಿಗಾಲದಲ್ಲಿ ಹಂದಿ ಜ್ವರ ರೋಗವನ್ನು ನಿಯಂತ್ರಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ರೋಗವನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.