ಐಎಸ್ ನಿಂದ ಭಾರತದ ಮೇಲೆ ದಾಳಿ ಸಾಧ್ಯತೆ: ಬ್ರಿಟನ್ ನಿಂದ ಎಚ್ಚರಿಕೆ
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಿಂದ ಭಾರತ ಮೇಲೆ ದಾಳಿ ಸಾಧ್ಯತೆ ಇದೆ

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಿಂದ ಭಾರತ ಮೇಲೆ ದಾಳಿ ಸಾಧ್ಯತೆ ಇದೆ ಎಂದು ಬ್ರಿಟನ್ ಎಚ್ಚರಿಸಿದೆ ಹಾಗೂ ಮಧ್ಯ ಪೂರ್ವ ದೇಶಗಳ ಉಗ್ರಗಾಮಿ ಸಂಘಟನೆಯ ಈ ದಾಳಿ ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಜನವರಿ ೧೫-೧೬ ರಂದು ನಡೆದ ಭಾರತ-ಯುಕೆ ಉಗ್ರಗಾಮಿ ತಡೆ ಜಂಟಿ ಕಾರ್ಯ ಸಭೆಯಲ್ಲಿ ಭಾರತದ ಅಧಿಕಾರಿಗಳಿಗೆ ಬ್ರಿಟಿಶ್ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆಯಲ್ಲಿ ಭಾರತದ ಅಧಿಕಾರಿಗಳು, ಪಾಕಿಸ್ತಾನ ಹೇಗೆ ಉಗ್ರಗಾಮಿಗಳಿಗೆ ಮನೆಯಾಗಿದೆ ಹಾಗೂ ಪಾಕಿಸ್ತಾನಕ್ಕೆ "ಒಳ್ಳೆಯ" ಮತ್ತು "ಕೆಟ್ಟ" ಭಯೋತ್ಪಾದನೆ ಎಂದು ವರ್ಗೀಕರಿಸದಿರಲು ಸೂಚನೆ ನೀಡುವಂತೆ ಬ್ರಿಟನ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾವು ಲಷ್ಕರ್-ಎ-ತೈಬಾ ಸಂಘಟನೆಯಿಂದ ಇರುವ ಭಯೋತ್ಪಾದನಾ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿ ಎಂದಿದ್ದೆವು. ಅವರು ಐ ಎಸ್ ದಾಳಿಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಬ್ರಿಟನ್, ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗಿಂತ ಐ ಎಸ್ ಸಂಘಟನೆಯ ಮೇಲೆ ಹೆಚ್ಚು ಕಣ್ಣಿಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ ೨೦೧೪ ರಲ್ಲಿ ನಾಲ್ಕು ಮುಂಬೈ ಯುವಕರು ಇರಾಕ್-ಸಿರಿಯಾ ಗೆ ಹೋಗಿ ಐ ಎಸ್ ಸಂಘಟನೆಗೆ ಸೇರಿದ್ದರು ಎನ್ನಲಾಗಿದೆ ಅದರಲ್ಲಿ ಒಬ್ಬ ನವೆಂಬರ್ ನಲ್ಲಿ ಹಿಂದಿರುಗಿ ಪೊಲೀಸರಿಗೆ ಶರಣಾಗಿದ್ದ.
ಹಾಗೆಯೇ ಐ ಎಸ್ ಸಂಘಟನೆಯ ಪರ ಟ್ವೀಟ್ ಗಳನ್ನು ಮಾಡುತ್ತಿದ್ದ ಬೆಂಗಳೂರು ಮೂಲದ ಒಬ್ಬ ಟೆಕ್ಕಿ ಕಳೆದ ತಿಂಗಳು ಬಂಧಿತನಾಗಿದ್ದ. ಅಮೇರಿಕಾದಿಂದ ಹಿಂದಿರುಗಿದ್ದ ಒಬ್ಬ ಎಂಜಿನಿಯರ್, ಐ ಎಸ್ ಸೇರಲು ಸನ್ನದ್ಧನಾಗಿದ್ದ. ಆದರೆ ಅವನನ್ನು ಎರಡು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


