ಸೋನಿಯಾ ಗಾಂಧಿ ಆತ್ಮಕತೆ ಭಾರತದಲ್ಲೀಗ ಲಭ್ಯ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕತೆ, ಸ್ಪಾನಿಶ್ ಲೇಖಕ ಜವಿರೋ ಮೋರೋ ಬರೆದ ವಿವಾದಾತ್ಮಕ ಪುಸ್ತಕ...

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕತೆ, ಸ್ಪಾನಿಶ್ ಲೇಖಕ ಜವಿರೋ ಮೋರೋ ಬರೆದ ವಿವಾದಾತ್ಮಕ ಪುಸ್ತಕ 'ದ ರೆಡ್ ಸಾರಿ' ಪ್ರಕಟವಾಗಿ 7 ವರ್ಷಗಳ ನಂತರ ಭಾರತದಲ್ಲಿ ಲಭ್ಯವಾಗಿದೆ.
2008ರಲ್ಲಿ ಸ್ಪೇನ್ನಲ್ಲಿ ಬಿಡುಗಡೆಯಾದ ಈ ಪುಸ್ತಕ ಇಲ್ಲಿಯವರೆಗೆ ಭಾರತದಲ್ಲಿ ಲಭ್ಯವಿರಲಿಲ್ಲ. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಂಘ್ವಿ ಅವರು ಲೇಖಕರ ವಿರುದ್ಧ ಕಾನೂನು ಹೋರಾಟವನ್ನೂ ಮಾಡಿದ್ದರು.
ಪ್ರಸ್ತುತ ಪುಸ್ತಕದ ಲೇಖಕ ಮೋರೋ ಅವರಿಗೆ ಸೋನಿಯಾ ಗಾಂಧಿ ಅವರ ಕುಟುಂಬದೊಂದಿಗೆ ಪರಿಚಯವಿಲ್ಲ. ಆದರೆ ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯ ನಂತರ ಏನಾಯ್ತು ಎಂಬುದರ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ.
1984ರಲ್ಲಿ ತಮ್ಮ ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆವಾಗ ಪ್ರಧಾನಿ ಪಟ್ಟ ವಹಿಸುವಂತೆ ರಾಜೀವ್ ಗಾಂಧಿಯವರನ್ನು ಕೇಳಲಾಯಿತು. ಈ ಸಂದರ್ಭ ಸೋನಿಯಾ ಗಾಂಧಿಯವರಿಗೆ ಮರಣ ಶಿಕ್ಷೆ ವಿಧಿಸಿದಂತಿತ್ತು.
ರಾಜೀವ್ ಗಾಂಧಿ ಸೋನಿಯಾರ ಕೈ ಹಿಡಿದು ತನ್ನ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದರೆ ಸೋನಿಯಾ ಕಣ್ಣೀರು ಹಾಕುತ್ತಿದ್ದರು. ಅವರು ನಿನ್ನನ್ನೂ ಕೊಲ್ಲುತ್ತಾರೆ ಎಂದು ರಾಜೀವ್ಗೆ ಹೇಳಿ ಸೋನಿಯಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಹೀಗೆ ಇಂದಿರಾ ಮತ್ತು ರಾಜೀವ್ ಹತ್ಯೆಯ ನಂತರ ಸೋನಿಯಾ ಹೇಗಿದ್ದರು ಎಂಬ ವಿಷಯಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


