ಪ್ರಧಾನ ಸುದ್ದಿ

ನಾನೇನು ನಕ್ಸಲ್‌ನಂತೆ ಕಾಣ್ತಿದ್ದೀನಾ? : ಕೇಜ್ರಿವಾಲ್

ನಾನೇನು ನಕ್ಸಲ್‌ನಂತೆ ಕಾಣುತ್ತಿದ್ದೇನಾ? ಎಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು...

ನಾನೇನು ನಕ್ಸಲ್‌ನಂತೆ ಕಾಣ್ತಿದ್ದೀನಾ? : ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ನಾನೇನು ನಕ್ಸಲ್‌ನಂತೆ ಕಾಣುತ್ತಿದ್ದೇನಾ? ಎಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಗುರುವಾರ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಕೇಜ್ರಿವಾಲ್, ನಾನೇನು ನಕ್ಸಲ್‌ನಂತೆ ಕಾಣುತ್ತಿದ್ದೇನಾ? ಎಂದು ನಾನು ದೆಹಲಿಯ ಜನರಲ್ಲಿ ಕೇಳಲಚ್ಛಿಸುತ್ತೇನೆ. ನಾನು ಕಾಡಿಗೆ ಹೋಗಲಿ ಎಂದು ಪ್ರಧಾನಿ  ಹೇಳುತ್ತಿದ್ದಾರೆ, ದೆಹಲಿಯ ಜನರು ಕೂಡಾ ಇದನ್ನೇ ಬಯಸುತ್ತಾರಾ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಕಳೆದ ಶನಿವಾರ ದೆಹಲಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅರಾಜಕತಾವಾದಿಯಾಗಿದ್ದವರು ಕಾಡಿಗೆ ಹೋಗಲಿ, ಹೋಗಿ ಅಲ್ಲಿ ನಕ್ಸಲರೊಂದಿಗೆ ಸೇರಿಕೊಳ್ಳಲಿ ಎಂದು ಕೇಜ್ರಿವಾಲ್‌ನ್ನುದ್ದೇಶಿಸಿ ಹೇಳಿದ್ದರು.

ಇದಕ್ಕೆ ಉತ್ತರಿಸಿ ಟ್ವೀಟ್ ಮಾಡಿದ ಕೇಜ್ರಿವಾಲ್, ಇಂಥಾ ರಾಜಕೀಯ ಒಳ್ಳೆಯದಲ್ಲ, ಕೇಜ್ರಿವಾಲ್ ಹೇಗೆ ಇರಲಿ ಆತ ಪ್ರಾಮಾಣಿಕ ವ್ಯಕ್ತಿ. ಆತನ ಉದ್ದೇಶವೂ ಸ್ಪಷ್ಟವಾಗಿದೆ. ನಾವು ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದೆ ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.