ಪ್ರಧಾನ ಸುದ್ದಿ

ಹಿಂದುತ್ವ , ಮತಾಂತರ ವಿವಾದ ಎನ್ ಡಿ ಎ ಭವಿಷ್ಯಕ್ಕೆ ಮಾರಕ

ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ...

ಹಿಂದುತ್ವ , ಮತಾಂತರ ವಿವಾದ ಎನ್ ಡಿ ಎ ಭವಿಷ್ಯಕ್ಕೆ ಮಾರಕ
ಉಪೇಂದ್ರ ಕುಶ್ವಾಹಾ
Published On :

ನವದೆಹಲಿ: ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್ಡಿಎ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಹೇಳಿದ್ದಾರೆ.

ಮತಾಂತರದ ಬಗ್ಗೆ ಯಾವುದೇ ಕಾನೂನು ಇರಲಿ, ನಾನದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ಕುಶ್ವಾಹಾ, ಇಂಥಾ ವಿಚಾರಗಳು ಸರ್ಕಾರವನ್ನು ಅಭಿವೃದ್ಧಿ ಪಥದಿಂದ ವಿಮುಖಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಬೇಕಿದೆ. ಅಭಿವೃದ್ಧಿಯನ್ನು ಸಾಕಾರಗೊಳಿಸಲು ಪಕ್ಷದ  ಸದಸ್ಯರು ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಸಹಕರಿಸಬೇಕಿದೆ.

ಸಮಸ್ಯೆಯೊಂದನ್ನು ಎತ್ತಿ ತೋರಿಸಲು ವಿಪಕ್ಷಗಳಿಗೆ ಆಗಾಗ್ಗೆ ಅವಕಾಶವನ್ನು ನೀಡಬಾರದು. ನಮ್ಮ ಗಮನ ಯಾವತ್ತೂ ಅಭಿವೃದ್ಧಿಯತ್ತ ಮಾತ್ರ ಇರಬೇಕು ಎಂಬುದೇ ಪ್ರಧಾನಿ ಮೋದಿಯವರ ಬಯಕೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಕುಶ್ವಾಹ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.