ಪ್ರಧಾನ ಸುದ್ದಿ

ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ನೆರವು: ಜಾನ್ ಕೆರ್ರಿ

ಬರಾಕ್ ಒಬಾಮ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸಲು ಇನ್ನು...

ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ನೆರವು: ಜಾನ್ ಕೆರ್ರಿ
ಜಾನ್ ಕೆರ್ರಿ
Published On :

ವಾಶಿಂಗ್ಟನ್: ಬರಾಕ್ ಒಬಾಮ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸಲು ಇನ್ನು ಕೆಲವೇ ದಿನ ಉಳಿದಿರುವಾಗ, ಪಾಕಿಸ್ತಾನ, ಉಗ್ರಗಾಮಿ ಸಂಘಟನೆಗಳ ವಿರುದ್ಧ ಸಶಕ್ತವಾಗಿ ಹೋರಾಡುತ್ತಿದೆ ಹಾಗೂ ಲಷ್ಕರ್ ಎ ತೈಬಾ (ಎಲ್ ಇ ಟಿ) ಮತ್ತು ಜೈಶ್ ಎ ಮೊಹಮ್ಮದ್ (ಜೆ ಎ ಎಂ) ಸಂಘಟನೆಯಗಳನ್ನು ನಿಯಂತ್ರಿಸಿದೆ ಎಂದಿರುವ ಯು ಎಸ್ ಎ ಕಾರ್ಯದರ್ಶಿ ಜಾನ್ ಕೆರ್ರಿ ಪಾಕಿಸ್ತಾನಕ್ಕೆ ಹೆಚ್ಚಿನ ನೆರವನ್ನು ಮಂಜೂರು ಮಾಡಿದ್ದಾರೆ.

ಅಮೆರಿಕಾ ಕಾಂಗ್ರೆಸ್ ೨೦೧೦ ರಲ್ಲಿ ಸಿದ್ಧಪಡಿಸಿದ್ದ ಕೆರ್ರಿ-ಲಾಗರ್ ಬಿಲ್ ನಡಿ ಪಾಕಿಸ್ತಾನ ೨೦೧೦ ರಿಂದ ೨೦೧೪ ರವರೆಗೆ ಪ್ರತಿ ವರ್ಷ ಮಿಲಿಟರಿಯೇತರ ಕಾರ್ಯಗಳಿಗೆ ೧.೫ ಬಿಲಿಯನ್ ಡಾಲರ್ ನೆರವು ಪಡೆಯುತ್ತಿತ್ತು.

ಮುಂಬೈ ದಾಳಿಯ ರೂವಾರಿ ಹಾಗೂ ಎಲ್ ಇ ಟಿ ಮುಖಂಡ ಹಫೀಜ್ ಸಯ್ಯದ್, ಪಾಕಿಸ್ತಾನದಲ್ಲೇ ನೆಲೆಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುತ್ತಿರುವಾಗ ಜಾನ್ ಕೆರ್ರಿ ಅವರ ಈ ಹೇಳಿಕೆ ಹಲವು ಭಾರತೀಯ ಮುಖಂಡರಿಗೆ ನಿರಾಸೆ ಮೂಡಿಸಿದೆ. ಇದಕ್ಕೆ ನೇರವಾಗಿ ಪ್ರತಿಕ್ರಿಯಿಸದ ಭಾರತ ರಕ್ಷಣಾ ಮಂತ್ರಿ ಮನೋಹರ್ ಪರ್ರಿಕರ್ "ಎಲ್ಲ ಭಯೋತ್ಪಾದನೆಯ ವಿರುದ್ಧ ನಾವು ಹೋರಾಡಬೇಕು. ಒಳ್ಳೆಯ ಅಥವಾ ಕೆಟ್ಟ ಭಯೋತ್ಪಾನೆ ಎಂಬುದಿಲ್ಲ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.