ರಾಷ್ಟ್ರಧ್ವಜ ವಿನ್ಯಾಸಕಾರನಿಗೆ ಗೌರವ
ವಿಜಯವಾಡ ಎ ಐ ಆರ್ ಕಟ್ಟಡವನ್ನು ಭಾನುವಾರ ...

ನವದೆಹಲಿ: ವಿಜಯವಾಡ ಎ ಐ ಆರ್ ಕಟ್ಟಡವನ್ನು ಭಾನುವಾರ ಸ್ವತಂತ್ರ ಹೋರಾಟಗಾರ ಹಾಗು ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗುವುದು.
ಇದೆ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು, ವಿಜಯವಾಡ ಎ ಐ ಆರ್ ಕಟ್ಟಡದ ಎದುರಿಗೆ ನಿರ್ಮಿಸಲಾಗಿರುವ ದಿವಂಗತ ವೆಂಕಯ್ಯ ಅವರ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಇದರ ನಂತರ ವಿಜಯವಾಡದ ಆಕಾಶವಾಣಿ ಕಟ್ಟಡ ಅಧಿಕೃತವಾಗಿ ಸ್ವತಂತ್ರಹೋರಾಟಗಾರ ಹಾಗು ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಹೆಸರು ಪಡೆಯಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಭಾರತಕ್ಕೆ ಅಗತ್ಯವಾದ ಧ್ವಜದ ಬಗ್ಗೆ ವಕಾಲತ್ತು ವಹಿಸಿದ್ದ ವೆಂಕಯ್ಯ ಧ್ವಜ ವಿನ್ಯಾಸದೊಂದಿಗೆ ಮಹಾತ್ಮ ಗಾಂಧಿಯವರ ಬಳಿ ತೆರಳಿದ್ದರು. ಕೆಲವೇ ಬದಲಾವಣೆಗಳೊಂದಿಗೆ ಗಾಂಧಿ ಒಪ್ಪಿಗೆ ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


