ನೆರೆಯವರ ಜಾಗದಲ್ಲಿ ಮಲ ವಿಸರ್ಜನೆ: ಮಹಿಳೆಯ ನಾಲಗೆ ಕತ್ತರಿಸಿದ ಆಸಾಮಿ
ಬಿಹಾರದ ಗ್ರಾಮವೊಂದರಲ್ಲಿ ತನ್ನ ನೆರೆಯ ಮಹಿಳೆ ತನಗೆ ಸೇರಿದ್ದ ಜಾಗದಲ್ಲಿ ...

ಪಾಟ್ನಾ: ಬಿಹಾರದ ಗ್ರಾಮವೊಂದರಲ್ಲಿ ತನ್ನ ನೆರೆಯ ಮಹಿಳೆ ತನಗೆ ಸೇರಿದ್ದ ಜಾಗದಲ್ಲಿ ಬಹಿರ್ದೆಸೆಗೆ ಹೋದದ್ದಕ್ಕೆ ಅವಳ ನಾಲಗೆಯನ್ನು ಕತ್ತರಿಸಿದ ಅಮಾನವೀಯ ಘಟನೆ ವರದಿಯಾಗಿದೆ.
ಪಾಟ್ನಾದಿಂದ ೫೦ ಕಿಮೀ ದೂರದಲ್ಲಿರುವ ವೈಷ್ಣವಿ ಜಿಲ್ಲೆಯ ಚಕ್ಯಾಜ್ ಗ್ರಾಮದಲ್ಲಿ ಈ ಘಟನೆ ಸಂಬವಿಸಿದೆ.
ಕುಸುಮಾ ದೇವಿಗೆ ಪಾಠ ಕಲಿಸಲು ಅವಳ ನಾಲಗೆಯನ್ನು ನೆರೆಮನೆಯ ಭಾಗವತ್ ಪಾಸ್ವಾನ್ ಎಂಬ ವ್ಯಕ್ತಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಸುಮಾ ದೇವಿಯ ಪತಿ ಇಂದ್ರದೇವ್ ಪಾಸ್ವಾನ್ ತನ್ನ ಪಕ್ಕದ ಮನೆಯವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
"ನನ್ನ ಪತ್ನಿಯನ್ನು ಮೊದಲು ಮನಬಂದಂತೆ ಥಳಿಸಿ ನಂತರ ಅವಳ ನಾಲಗೆಯನ್ನು ಅರ್ಧಕ್ಕೆ ಕತ್ತರಿಸಿದರು" ಎಂದು ಅವನು ತಿಳಿಸಿದ್ದಾನೆ.
"ಎರಡೂ ಕುಟುಂಬಗಳ ಹಳೆಯ ದ್ವೇಷಕ್ಕೆ ಕೂಡ ಈ ಘಟನೆ ನಡೆದಿರಬಹುದು" ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


