೮೦೦೦ ಅಪರೂಪದ ಪುಸ್ತಕ, ಹಸ್ತಪ್ರತಿಗಳನ್ನು ಸುಟ್ಟು ಹಾಕಿದ ಇಸ್ಲಾಮಿಕ್ ಸ್ಟೇಟ್
ವಿಶ್ವದ ಕರಾಳ ದಿನಕ್ಕೆ ಮತ್ತೊಂದು ಸೇರ್ಪಡೆ. ಉತ್ತರ ಇರಾಕಿನ ಮೋಸುಲ್ ಗ್ರಂಥಾಲಯದಲ್ಲಿ ೮೦೦೦ ಅತಿ ವಿರಳ ಪುಸ್ತಕ

ಮೋಸುಲ್: ವಿಶ್ವದ ಕರಾಳ ದಿನಕ್ಕೆ ಮತ್ತೊಂದು ಸೇರ್ಪಡೆ. ಉತ್ತರ ಇರಾಕಿನ ಮೋಸುಲ್ ಗ್ರಂಥಾಲಯದಲ್ಲಿ ೮೦೦೦ ಅತಿ ವಿರಳ ಪುಸ್ತಕ ಮತ್ತು ಹಸ್ತಪ್ರತಿಗಳನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಸುಟ್ಟು ಹಾಕಿರುವ ಘಟನೆ ತಡವಾಗಿ ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮೋಸುಲ್ ಸಾರ್ವಜನಿಕ ಗ್ರಂಥಾಲಯವನ್ನು ಸ್ಫೋಟಕ ವಸ್ತುಗಳನ್ನು ಬಳಸಿ ಬಾಂಬ್ ದಾಳಿಗೆ ಗುರಿ ಮಾಡಿದೆ ಎಂದು ಗರಂಥಾಲಯದ ನಿರ್ದೇಶಕ ಘಾನಿಂ ಅಲ ತಾನ್ ತಿಳಿಸಿದ್ದಾರೆ. ಗ್ರಂಥಾಲಯದ ಅಧಿಕಾರಿಗಳು ಗ್ರಂಥಾಲಯವೊಂದನ್ನು ಉಳಿಸುವಂತೆ ಎಷ್ಟು ಮನಿವಿ ಮಾಡಿದರೂ ಕಿವಿಗೊಡದೆ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
೨೦೦೩ ರ ವೇಳೆಯಲ್ಲಿ ಇರಾಕ್ ಮೇಲೆ ಅಮೇರಿಕಾ ನಡೆಸಿದ ದಾಳಿಯಲ್ಲೂ ಕೂಡ ಜನರು ಗ್ರಂಥಾಲಯದ ಪುಸ್ತಕಗಳನ್ನು ದೋಚಿದ್ದ, ಹಾಳುಗೆಡವಿದ್ದ ನಿದರ್ಶನಗಳಿದ್ದವು. ಆದರೂ ಸುತ್ತಮುತ್ತ ನೆಲೆಸಿದ್ದ ಜನ ಗ್ರಂಥಾಲಯದ ಅಮೂಲ್ಯ ಪುಸ್ತಕಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು.
ಕೃಷಿಯ ಜನಕ, ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಇರಾಕಿನ ತತ್ವಶಾಸ್ತ್ರ ಮತ್ತು ಇತರ ವಿಷಯಗಳಿಗೆ ಒಳಪಟ್ಟಂತ ಪ್ರಾಚಿನ ಜ್ಞಾನ ಸಂಪತ್ತು ಈ ಗ್ರಂಥಾಲಯದಲ್ಲಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


