ಪ್ರಧಾನ ಸುದ್ದಿ

ಯೋಗದಿಂದ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ: ಮುರಳಿ ಮನೋಹರ ಜೋಷಿ

ಯೋಗ ಪ್ರತಿ ಸಾಮಾನ್ಯ ಮನುಷ್ಯನ ಜೀವನದ ಭಾಗವಾದರೆ, ಅದು ದೇಶದಲ್ಲಿ ರೇಪ್ ಪ್ರಕರಣ ಸಂಖ್ಯೆಗಳನ್ನು ಕಡಿತಗೊಳಿಸಲು ನೆರವಾಗುತ್ತದೆ...

ಯೋಗದಿಂದ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ: ಮುರಳಿ ಮನೋಹರ ಜೋಷಿ
ಬಿಜೆಪಿ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ
Published On :

ನವದೆಹಲಿ: ಯೋಗ ಪ್ರತಿ ಸಾಮಾನ್ಯ ಮನುಷ್ಯನ ಜೀವನದ ಭಾಗವಾದರೆ, ಅದು ದೇಶದಲ್ಲಿ ರೇಪ್ ಪ್ರಕರಣ ಸಂಖ್ಯೆಗಳನ್ನು ಕಡಿತಗೊಳಿಸಲು ನೆರವಾಗುತ್ತದೆ ಎಂದು ಭಾನುವಾರ ಬಿಜೆಪಿ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಹೇಳಿದ್ದಾರೆ,

ಮುಸ್ಲಿಮರು ದಿನಕ್ಕೆ ಐದು ಬಾರಿ ಯೋಗ ಮಾಡುತ್ತಾರೆ ಮತ್ತು ಪ್ರವಾದಿ ಮಹಮದ್ ಅತಿ ದೊಡ್ಡ ಯೋಗಿ ಎಂದು ವಿವಾದ ಸೃಷ್ಟಿಸಬಲ್ಲ ಹೇಳಿಕೆಗಳನ್ನು ಕೂಡ ನೀಡಿದ್ದಾರೆ.

ದೆಹಲಿಯಲ್ಲಿ "ಹೊಸ ಯುಗಕ್ಕೆ ಅಯ್ಯಂಗಾರ್ ಅವರ ಯೋಗ ಮಾರ್ಗ" ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯೂಯಾರ್ಕ್ ನಲ್ಲಿ ಮಹರ್ಷಿ ಮಹೇಶ್ ಯೋಗಿ ನಡೆಸಿದ ಧ್ಯಾನ ಪ್ರಯೋಗದ ಬಗ್ಗೆ ಉದಾಹರಿಸಿದ ಜೋಷಿ, ಅಲ್ಲಿನ ವಿಶ್ವವಿದ್ಯಾಲಯದ ಉಪಕುಲಪತಿಗಳೊಬ್ಬರು ನಡೆಸಿದ ಅಧ್ಯಯನದ ಪ್ರಕಾರ ನ್ಯೂಯಾರ್ಕ್ ನಲ್ಲಿ ಜೈಲುವಾಸಿಗಳು ಯೋಗ ಮಾಡಿದ ನಂತರ ಅಪರಾಧಗಳ ಸಂಖ್ಯೆ ಕಡಿಮೆಯಾಗಿತ್ತಂತೆ ಎಂದಿದ್ದಾರೆ,

"ನಮ್ಮ ಮುಸ್ಲಿಂ ಬಾಂಧವರು ದಿನಕ್ಕೆ ಐದು ಬಾರಿ ಯೋಗ ಮಾಡುತ್ತಾರೆ. ಆ ನಮಾಜ್ ಮಾಡುವ ಭಂಗಿಗಳು... ಆದುದರಿಂದಲೆ ನನಗನ್ನಿಸುತ್ತದೆ ಪ್ರವಾದಿ ಮೊಹಮ್ಮದ್ ಅವರು ಅತಿ ದೊಡ್ಡ ಯೋಗಿಯಾಗಿದ್ದರು" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.