ಪ್ರಧಾನ ಸುದ್ದಿ

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌' ನಮ್ಮ ಗುರಿ

ವಿಶ್ವಕ್ಕೆ ಇಂದು ಭಾರತದ ಅಭಿವೃದ್ಧಿ ಬೇಕಾಗಿದೆ. ಭಾರತೀಯರ ಕನಸು ನನಸು ಮಾಡಲು ಪ್ರಯತ್ನಿಸುತ್ತೇವೆ. ದೇಶದ ಜನರಿಗೆ ಭದ್ರತೆ ಒದಗಿಸಲು ಹಾಗೂ...

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌' ನಮ್ಮ ಗುರಿ
ಪ್ರಣಬ್ ಮುಖರ್ಜಿ
Published On :

ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ.

ರಾಷ್ಟ್ರಪತಿ ಭವನದಿಂದ ಸಂಸತ್ತಿಗೆ ಕುದುರೆ ಸಾರೂಟಿನಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಕರೆತರೆಲಾಯಿತು. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಅವರನ್ನು ಸ್ವಾಗತಿಸಿದರು.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದ್ದು, ವಿಶ್ವಕ್ಕೆ ಇಂದು ಭಾರತದ ಅಭಿವೃದ್ಧಿ ಬೇಕಾಗಿದೆ. ಭಾರತೀಯರ ಕನಸು ನನಸು ಮಾಡಲು ಪ್ರಯತ್ನಿಸುತ್ತೇವೆ. ದೇಶದ ಜನರಿಗೆ ಭದ್ರತೆ ಒದಗಿಸಲು ಹಾಗೂ ಬಡವರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮಂಗಳಯಾನ ಯಶಸ್ಸನ್ನು ಶ್ಲಾಘಿಸಿದ ಪ್ರಣಬ್ ಮುಖರ್ಜಿ, 2014ರ ಸೆಪ್ಟೆಂಬರ್ 24ರಂದು ಮಂಗಳಯಾನ ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರಕ್ಕೂ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಸಾಧಿಸಲಿದ್ದು, ಜಗತ್ತು ಬೆರಾಗಾಗುವಂತ ಯೋಜನೆಗಳು ನಮ್ಮ ಮುಂದಿವೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಉದ್ಯೋಗ ಸೃಷ್ಟಿ, ಜನದನಿ ಸೇರಿದಂತೆ ಇತರೆ ವಿಚಾರಗಳ ಕುರಿತು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಕಪ್ಪು ಹಣದ ವಿಚಾರದಲ್ಲಿ ನಮ್ಮ ನಿರ್ಧಾರ ಕಠಿಣವಾಗಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌' ನಮ್ಮ ಗುರಿ ಎಂದ ಅವರು ಎಲ್ಲರೂ ಒಟ್ಟುಗೂಡಿದರೆ, ಎಲ್ಲರ ಅಭಿವೃದ್ಧಿ ಸಾಧ್ಯ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಲು ನಾವು ಬದ್ಧ. ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಆಧ್ಯತೆ ನೀಡಲಾಗಿದೆ. 2015 ಆಗಸ್ಟ್ 15ರೊಳಗೆ ದೇಶದ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದ ಅವರು, ಸರ್ಕಾರ ಕೆಲವು ರೈತರಿಂದ ಭೂಮಿಯನ್ನು ವಶಪಡಿಸಿಕೊಂಡಿದ್ದು, ರೈತರ ಭೂಮಿಯಲ್ಲಿ ಶಾಲೆ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಯುವಜನಾಂಗ ಭಾರತದಲ್ಲಿದೆ. ಯುವಜನಾಂಗ ಅನಾವರಣವಾಗಬೇಕಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಯುವಜನಾಂಗ ಪಾತ್ರ ದೊಡ್ಡದು. ತಂತ್ರಜ್ಞಾನ ಬಳಸಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವುದೇ ಸವಾಲಾಗಿದೆ ಎಂದು ಹೇಳಿದ್ದಾರೆ.

ಇನ್ನು ರೇಲ್ವೆ ಇಲಾಖೆಯಲ್ಲೂ ಹಲವು ಮಹತ್ತರ ಬದಲಾವಣೆಯಾಗಬೇಕಿದೆ. ರೇಲ್ವೆ ಇಲಾಖೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗವುದು. ರೇಲ್ವೆ ಪ್ರಯಾಣಿಕರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು  ಅವರು ತಿಳಿಸಿದ್ದಾರೆ.

  • ಭಾಷಣದ ಪ್ರಮುಖಾಂಶಗಳು
  • ಒಳಚರಂಡಿ ವ್ಯವಸ್ಥೆ, ಸ್ಮಾರ್ಟ್ ಸಿಟಿಗೆ ಆದ್ಯತೆ,
  • ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವುದೇ ಸವಾಲಾಗಿದೆ
  • ಜಡ್ಜ್‌ಗಳ ನೇಮಕಕ್ಕೆ ಹೊಸ ಸಮಿತಿಯನ್ನು ರಚಿಸಲಾಗಿದೆ
  • ಮಹಿಳೆಯರ ರಕ್ಷಣೆಗೆ ಹಲವು ಯೋಜನೆ ಜಾರಿ
  • ಜನವರಿಯಿಂದ ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಖಾತೆಗೆ ನೇರವಾಗಿ ವರ್ಗಾಹಿಸಲಾಗುವುದು
  • ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿ
  • ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸರ್ಕಾರ ಬದ್ಧ
  • ಆದರ್ಶ ಗ್ರಾಮ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ
  • ಪಡೇ ಭಾರತ್, ಬಡೇ ಭಾರತ್ ಯೋಜನೆ
  • ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಹೆಚ್ಚಿಸಲಾಗಿದೆ
  • ಸ್ವಚ್ಛ ಭಾರತ್ ಮಿಷನ್ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸಲಾಗಿದೆ.
  • ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಹಲವು ನಿರ್ಧಾರ
  • ದೇಶದಲ್ಲಿ ಉದ್ಯೋಗ ಸೃಷ್ಟಿ
  • ವಿದ್ಯುತ್ ಸಮಸ್ಯೆ ನಿವಾರಣೆ
  • ಮೇಕ್ ಇನ್ ಇಂಡಿಯಾ
  • ವಿದೇಶಗಳೊಂದಿಗೆ ಉತ್ತಮ ಬಾಂದವ್ಯ
  • ಭೂ ಸ್ವಾಧೀನ ಕಾಯ್ದೆಗೆ ಕೇಂದ್ರ ಸುಗ್ರಿವಾಜ್ಞೇ ಹೊರಡಿಸಿರುವುದು
  • ಸ್ವಚ್ಛ ಕುಡಿಯುವ ನೀರು ಪೂರೈಸಲು ಯೋಜನೆ ಜಾರಿ
  • ನೀರಾವರಿ ವಲಯ ಬಲಪಡಿಸಲು ನೂತನ ಯೋಜನೆ
  • ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಅಗತ್ಯ ಕ್ರಮ
  • ಪ್ರಧಾನಮಂತ್ರಿ ಜನಧನ್ ಯೋಜನೆ ಜಾರಿಗೆ ತಂದಿದೆ
  • ಪೆಟ್ರೋಲ್ ಬೆಲೆಯಲ್ಲಿ ರು.17 ಕಡಿತಗೊಳಸಲಾಗಿದೆ
  • ಸ್ವಚ್ಛತಾಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.