ಗುಜರಾತ್‌ನ ವ್ಯಕ್ತಿಗೆ ಅಮೆರಿಕದಲ್ಲಿ ಹಲ್ಲೆ ಪ್ರಕರಣ: ಕ್ಷಮೆಯಾಚಿಸಿದ ಅಲಬಾಮಾ ಗವರ್ನರ್
ಕೆಲವು ದಿನಗಳ ಹಿಂದೆ ಅಲಬಾಮಾದಲ್ಲಿ 57 ವರ್ಷ ಪ್ರಾಯದ ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್ ಎಂಬ ವ್ಯಕ್ತಿಯನ್ನು ಅನಾವಶ್ಯಕವಾಗಿ...

Published On :
ಅಲಬಾಮಾ: ಕೆಲವು ದಿನಗಳ ಹಿಂದೆ ಅಲಬಾಮಾದಲ್ಲಿ 57 ವರ್ಷ ಪ್ರಾಯದ ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್ ಎಂಬ ವ್ಯಕ್ತಿಯನ್ನು ಅನಾವಶ್ಯಕವಾಗಿ ಹೊಡೆದು ಆಂಶಿಕ ಪಾರ್ಶ್ವವಾಯುವಿಗೆ ಗುರಿ ಮಾಡಿ ಗಂಭೀರ ಸ್ಥಿತಿಗೆ ತಳ್ಳಿರುವ ಘಟನೆಯ ಬಗ್ಗೆ ಅಲಬಾಮಾ ಗವರ್ನರ್ ರಾಬರ್ಟ್ ಬೆನ್‌ಟ್ಲೀ ವಿಶಾದ ವ್ಯಕ್ತ ಪಡಿಸಿ ಕ್ಷಮೆ ಕೋರಿದ್ದಾರೆ.
ಭಾರತದ ವಾಣಿಜ್ಯ ದೂತಾಧಿಕಾರಿ ಅಜಿತ್ ಕುಮಾರ್ ಅವರಿಗೆ ಬೆನ್‌ಟ್ಲೀ ಪತ್ರ ಬರೆದಿದ್ದು, ಸುರೇಶ್ ಭಾಯಿ ಅವರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಬೆನ್‌ಟ್ಲೀ ನಿನ್ನೆ ಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.
ಸುರೇಶ್ ಭಾಯಿ ಅವರ ಮೇಲೆ ಮೆಡಿಸನ್ ಪೊಲೀಸ್ ಇಲಾಖೆಯವರು ಮಾಡಿದ ದೌರ್ಜನ್ಯವನ್ನು ಖಂಡಿಸುತ್ತೇನೆ. ಮಿ. ಪಟೇಲ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ನ್ಯಾಯ ಒದಗಿಸುತ್ತೇನೆ ಎಂಬ ಭರವಸೆಯನ್ನು ನಾನು ಭಾರತ ಸರ್ಕಾರಕ್ಕೆ ನೀಡುತ್ತೇನೆ ಎಂದಿದ್ದಾರೆ.
ಫೆ.6ರಂದು ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದ ವೇಳೆ ಪ್ರಶ್ನಿಸಲ್ಪಟ್ಟಿದ್ದ ಸುರೇಶ್ ಭಾಯಿ ಪಟೇಲ್ ಅವರು ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ಪೊಲೀಸರಿಗೆ ಸೂಕ್ತ ಉತ್ತರ ನೀಡಲಾಗದೆ ತಡಬಡಿಸಿದ್ದರು. ಆಗ ಅಲಬಾಮಾ ಪೊಲೀಸ್ ದಳದ ಇಬ್ಬರು ಪೊಲೀಸರು ಪಟೇಲ್ ಅವರನ್ನು ಅನಗತ್ಯವಾಗಿ ಹಿಗ್ಗಾಮುಗ್ಗಾ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು.
ಒಟ್ಟು ಪರಿಣಾಮವಾಗಿ ಸುರೇಶ್‌ಭಾಯಿ ಪಟೇಲ್ ಅವರು ಆಂಶಿಕವಾಗಿ ಪಾರ್ಶ್ವವಾಯುವಿಗೆ ಗುರಿಯಾಗಿದ್ದರು. ಪ್ರಕೃತ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸಲ್ಪಟ್ಟ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


