ಪಂಸಾರೆ ಶೂಟಿಂಗ್: ಬಿಜೆಪಿಯನ್ನು ದೂರಿದ ಶಿವಸೇನ
ಕಮ್ಯುನಿಸ್ಟ್ ನಾಯಕ ಗೋವಿಂದ್ ಪಂಸಾರೆ ಅವರ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿರುವ ಶಿವಸೇನೆ, ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ

ಮುಂಬೈ: ಕಮ್ಯುನಿಸ್ಟ್ ನಾಯಕ ಗೋವಿಂದ್ ಪಂಸಾರೆ ಅವರ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿರುವ ಶಿವಸೇನೆ, ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ತನ್ನ ಮೈತ್ರಿ ಪಕ್ಷ ಬಿಜೆಪಿಯನ್ನು ದೂರಿದೆ.
"ಕೊಲ್ಹಾಪುರದಲ್ಲಿ ದಟ್ಟ ಬೆಳಕಿನಲ್ಲಿ ಪಂಸಾರೆ ಅವರಿಗೆ ಶೂಟ್ ಮಾಡಲಾಗಿದೆ. ಸರ್ಕಾರದ ಬದಲಾವಣೆಯ ಹೊರತೂ ಇವೆಲ್ಲಾ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ" ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ನುಡಿದಿದೆ.
"ಯಾವಾಗ ನರೇಂದ್ರ ದಭೋಲ್ಕರ್ (ಮೂಢನಂಬಿಕೆ ವಿರೋಧಿ) ಅವರನ್ನು ಹತ್ಯೆ ಮಾಡಿದರೋ ಆಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿತ್ತು. ಆಗ ಆ ಪಕ್ಷವನ್ನು ಕೊಲೆಗಾಗಿ ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ಈಗ ಸೂರ್ಯನ ಬೆಳಕಿನಲ್ಲಿ ನಡೆದಿರುವ ಈ ಗುಂಡಿನ ದಾಳಿಗೆ ಯಾರು ಹೊಣೆ ಹೊರಬೇಕು" ಎಂದು ಸೇನಾ ಪ್ರಶ್ನಿಸಿದೆ.
"ಈಗ ನಮ್ಮದೇ ಸರ್ಕಾರ (ಶಿವಸೇನಾ ಫಡ್ನವಿಸ್ ಸರ್ಕಾರದ ಭಾಗವಾಗಿದ್ದಾರೆ). ಆದುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ತಪ್ಪಿತಸ್ಥರು ಯಾವುದೇ ಭಯವಿಲ್ಲದೆ ಓಡಾಡುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ" ಎಂದಿದ್ದಾರೆ.
"ಪಂಸಾರೆ ಹಿಂದುತ್ವ ವಿರೋಧಿ. ಶಿವಾಜಿ ಮಹಾರಾಜನ ಬಗೆ ಅವರು ಬರೆದಿರುವ ಪುಸ್ತಕ ವಿವಾದಾತ್ಮಕ. ಕೊಲ್ಹಾಪುರದಲ್ಲಿ ನಾಥುರಾಮ ಘೋಡ್ಸೆ ಬಗ್ಗೆ ಅವರು ಮಾಡಿದ ಭಾಷಣ ಹಲವರಿಗೆ ಇಷ್ಟವಾಗಲಿಲ್ಲ. ಆದರೆ ಸಾಮಾಜಿಕ ಕೆಲಸಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾದದ್ದು" ಎಂದಿದೆ ಸೇನಾ.
ದಾಳಿಗೊಳಗಾದ ಪಂಸಾರೆ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದರೆ. ಸ್ಥಿತಿ ಗಂಭೀರ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


