ಪ್ರಧಾನ ಸುದ್ದಿ

'ಜ್ವರ ಹೋಯಿತು', ಮೊದಲ ದಿನದ ಕೆಲಸಕ್ಕೆ ಆಗಮಿಸಿದ ಕೇಜ್ರಿವಾಲ್

ಕಳೆದ ಐದು ದಿನಗಳಿಂದ ಜ್ವರಿದಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್ ಇಂದು ತಮ್ಮ ಕಚೇರಿಯ ಮೊದಲ ದಿನದ ಕೆಲಸಕ್ಕೆ ಬರುವ ಮುನ್ನ

'ಜ್ವರ ಹೋಯಿತು', ಮೊದಲ ದಿನದ ಕೆಲಸಕ್ಕೆ ಆಗಮಿಸಿದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ಕಳೆದ ಐದು ದಿನಗಳಿಂದ ಜ್ವರಿದಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ತಮ್ಮ ಕಚೇರಿಯ ಮೊದಲ ದಿನದ ಕೆಲಸಕ್ಕೆ ಬರುವ ಮುನ್ನ ಈಗ ಹಿತವೆನಿಸುತ್ತಿದೆ ಎಂದಿದ್ದಾರೆ.

ಇಂದು ಸಂಪುಟ ಸಭೆಯನ್ನು ಕೂಡ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಮೊದಲ ವಿಧಾನಸಭಾ ಅಧಿವೇಶನದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು.

"ಜ್ವರ ಹೋಯಿತು. ಈಗ ಸಾಕಷ್ಟು ಹಿತವೆನಿಸುತ್ತಿದೆ. ಚುನವಾಣೆಗಳಿಂದ ನಿಲ್ಲಿಸಿದ್ದ ದಿನನಿತ್ಯದ ನಡಿಗೆ ಮತ್ತು ಯೋಗ ಪುನರಾರಂಭಿಸಿದ್ದೇನೆ. ಇಂದು ನನ್ನ ಕಚೇರಿಯ ಮೊದಲ ದಿನ. ನನಗಾಗಿ ಪ್ರಾರ್ಥನೆ ಮಾಡಿ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ಜ್ವರದಿಂದ ನರಳುತ್ತಿದ್ದ ಕೇಜ್ರಿವಾಲ್, ಮತ ಎಣಿಕೆ ದಿನ ಸಂಭ್ರಮಾಚರಣೆಯಿಂದ ಹೊರ ನಡೆದು ವಿಶ್ರಾಂತಿಯ ಮೊರೆ ಹೋಗಿದ್ದರು. ಪ್ರಮಾಣ ವಚನದ ದಿನವೂ ಜ್ವರಕ್ಕೆ ಕ್ರೋಸಿನ್ ಮಾತ್ರೆ ನುಂಗಿ ಬಂದಿದ್ದೇನೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.