ಪ್ರಧಾನ ಸುದ್ದಿ

ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಧೋನಿ ದೂರಿದ ಯುವಿ ತಂದೆ; ಸಮಾಧಾನದ ಟ್ವೀಟ್ ಮಾಡಿದ ಯುವರಾಜ್

ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ತಮ್ಮ ಮಗ ಆಯ್ಕೆಯಾಗದಿದ್ದಕ್ಕೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸೋಮವಾರ ಎಂ ಎಸ್ ಧೋನಿ

ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಧೋನಿ ದೂರಿದ ಯುವಿ ತಂದೆ; ಸಮಾಧಾನದ ಟ್ವೀಟ್ ಮಾಡಿದ ಯುವರಾಜ್
ಯುವರಾಜ್ ಸಿಂಗ್
Published On :

ನವದೆಹಲಿ: ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ತಮ್ಮ ಮಗ ಆಯ್ಕೆಯಾಗದಿದ್ದಕ್ಕೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸೋಮವಾರ ಎಂಎಸ್ ಧೋನಿ ಅವರನ್ನು ದೂರಿದ್ದಾರೆ.

"ನನ್ನ ಮಗನ ಜೊತೆ ಎಂಎಸ್ ಧೋನಿಗೆ ಏನು ತೊಂದರೆ ನನಗೆ ತಿಳಿಯಬೇಕು. ನನ್ನ ಮಗನಿಗೆ ಕ್ಯಾನ್ಸರ್ ತೊಂದರೆ ಇದ್ದಾಗಲೂ ತಂಡಕ್ಕಾಗಿ ಆಡಿದ್ದಾನೆ" ಎಂದು ಭಾರತದ ಒಂದು ದಿನ ಕ್ರಿಕೆಟ್ ತಂಡದ ನಾಯಕನ ಮೇಲೆ ಯೋಗರಾಜ್ ಕಿಡಿ ಕಾರಿದ್ದಾರೆ.

"ನನ್ನ ಮಗ ಕ್ರಿಕೆಟ್ ವರ್ಲ್ಡ್ ಕಪ್ ತಂಡದಲ್ಲಿ ಇಲ್ಲ ಎಂದು ತಿಳಿದು ನನಗೆ ಆಘಾತವಾಯಿತು. ಎಂಎಸ್ ಧೋನಿಗೆ ನನ್ನ ಮಗನ ಜೊತೆ ವೈಯಕ್ತಿಕ ತೊಂದರೆಗಳಿದ್ದರೆ ನಾನೇನೂ ಮಾಡುವುದಿಲ್ಲ. ದೇವರು ನ್ಯಾಯ ಕೊಡುತ್ತಾನೆ. ಅವರು (ಎಂಎಸ್ ಧೋನಿ) ಆಯ್ಕೆಗಾರರಿಗೆ ತಂಡದಲ್ಲಿ ಯುವರಾಜ್ ಬೇಕಾಗಿಲ್ಲ ಎಂದು ತಿಳಿಸಿದ್ದರು" ಎಂದು ಯೋಗರಾಜ್ ದೂರಿದ್ದಾರೆ.

ಈ ಪ್ರಕರಣಕ್ಕೆ ಸಮಾಧಾನ ನೀಡಲು ಪ್ರಯತ್ನಿಸಿರುವ ಯುವರಾಜ್ "ಎಲ್ಲ ಪೋಷಕರಂತೆ  ನನ್ನ ತಂದೆಯೂ ಮಗನ ಮೇಲಿನ ಪ್ರೀತಿಯಿಂದ ಹಾಗೆ ಮಾತನಾಡಿದ್ದಾರೆ. ಮಹಿ ಜೊತೆ ಆಡುವುದನ್ನು ನಾನು ಸಂಭ್ರಮಿಸಿದ್ದೇನೆ. ಮುಂದೆಯೂ ಆಡುತ್ತೇನೆ" ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.