ಪ್ರಧಾನ ಸುದ್ದಿ

ವಾಸದ ಮತ್ತು ಸ್ಲಂ ಪ್ರದೇಶಗಳ ಮನೆಗಳನ್ನು ಕೆಡವುವುದಿಲ್ಲ: ಎಎಪಿ ಸರ್ಕಾರ

ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಆದೇಶದಲ್ಲಿ ದೆಹಲಿಯಲ್ಲಿ ವಾಸವಿರುವ ಮನೆಗಳನ್ನು ಕೆಡುವುವುದನ್ನು ನಿಷೇಧಿಸಿದೆ.

ವಾಸದ ಮತ್ತು ಸ್ಲಂ ಪ್ರದೇಶಗಳ ಮನೆಗಳನ್ನು ಕೆಡವುವುದಿಲ್ಲ: ಎಎಪಿ ಸರ್ಕಾರ
ಅರವಿಂದ್ ಕೇಜ್ರಿವಾಲ್ ಸಚಿವ ಸಂಪುಟ
Published On :

ನವದೆಹಲಿ: ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಆದೇಶದಲ್ಲಿ ದೆಹಲಿಯಲ್ಲಿ ವಾಸವಿರುವ ಮನೆಗಳನ್ನು ಕೆಡುವುವುದನ್ನು ನಿಷೇಧಿಸಿದೆ.

ಶನಿವಾರ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ ಅರವಿಂದ ಕೇಜ್ರಿವಾಲ್ ಚುನಾವಣಾ ಪ್ರಚಾರ ವೇಳೆ ಒಂದು ಮನೆಯನ್ನು ಕೂಡ  ಉರುಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಶಾಶ್ವತ ಕಟ್ಟಡಗಳಲ್ಲಿ ಸ್ಥಳಾಂತರ ಮಾಡುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದರು.

ಪೂರ್ವ ದೆಹಲಿಯ ಶಾರಾದ ಪ್ರದೇಶದಲಿನ ಸ್ಲಂಗಳ ಧ್ವಂಸದ ವಿರುದ್ದ ಅರವಿಂದ ಕೇಜ್ರಿವಾಲ್ ಮನೆಯ ಎದುರು ನಡೆದ ಪ್ರತಿಭಟನೆಯ ಹಿನ್ನಲೆಯಲ್ಲಿ ಈ ಆದೇಶವನ್ನು ಎಎಪಿ ಸರ್ಕಾರ ಹೊರಡಿಸಿದೆ.

ರಾಮಲೀಲಾ ಮೈದಾನದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಲಂಗಳ ತೆರವು ಕಾರ್ಯ ನಡೆದಿತ್ತು ಎಂದು ವರದಿಯಾಗಿತ್ತು. ಈ ಕಾರ್ಯದಲ್ಲಿ ಸ್ಲಂ ನಿವಾಸಿಗಳು ಗಾಯಗೊಂಡರು ಎಂದು ಪ್ರತಿಭಟನಕಾರರು ದೂರಿದ್ದಾರೆ.

ಸರ್ಕಾರಿ ಜಾಗಗಳಲ್ಲಿ ಈ ಸ್ಲಂಗಳು ತಲೆ ಎತ್ತಿರುವುದರಿಂದ ಅವುಗಳ ತೆರವಿಗೆ ಸಹಕರಿಸುವಂತೆ ನಮಗೆ ಆದೇಶವಿತ್ತು ಎಂದು ಪೊಲೀಸರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.