ಇಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಕೇಜ್ರಿವಾಲ್
ಜನಲೋಕಪಾಲ್ ಪ್ರಕರಣದ ಹಿನ್ನಲೆಯಲ್ಲಿ ಒಂದು ವರ್ಷದ ಹಿಂದೆ ಇದೇ ದಿನ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ರಾಜೀನಾಮೆ ನೀಡಿದ್ದರು.

ನವದೆಹಲಿ: ಜನಲೋಕಪಾಲ್ ಪ್ರಕರಣದ ಹಿನ್ನಲೆಯಲ್ಲಿ ಒಂದು ವರ್ಷದ ಹಿಂದೆ ಇದೇ ದಿನ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ರಾಜೀನಾಮೆ ನೀಡಿದ್ದರು. ಎಎಪಿ ಪಕ್ಷದ ಅಭೂತಪೂರ್ವ ಗೆಲುವಿನ ನಂತರ ಈಗ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ದೆಹಲಿಯ ಎಂಟನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸನ್ನದ್ಧರಾಗಿದ್ದಾರೆ.
ಕೇಜ್ರಿವಾಲ್ ಅವರ ನಿಕಟವರ್ತಿ ಮನೀಶ್ ಸಿಸೋದಿಯಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೆಯೇ ಮತ್ತೋ ಎಎಪಿ ನಾಯಕ ಸತ್ಯೇಂದ್ರ ಜೈನ್ ಕೂಡ ಎರಡನೆ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನುಳಿದ ಶಾಸಕರು ಇದೇ ಮೊದಲ ಬಾರಿಗೆ ಸಂಪುಟ ಸೇರಿಕೊಳ್ಳಲಿದ್ದಾರೆ. ಜಿತೇಂದ್ರ ತೋಮಾರ್, ಗೋಪಾಲ್ ರಾಯ್, ಸಂದೀಪ್ ಕುಮಾರ್ ಮತ್ತು ಆಸಿಮ್ ಅಹ್ಮದ್ ಖಾನ್ ಕೇಜ್ರಿವಾಲ್ ಸಂಪುಟ ಸೇರಲಿರುವ ಇತರ ಶಾಸಕರು.
ಶಹದಾರ ಶಾಸಕ ರಾಮನಿವಾಸ್ ಗೋಯಲ್ ವಿಧಾನಸಭೆಯ ಸ್ಪೀಕರ್ ಆಗಿ ಹಾಗೂ ಶೈಲ್ಮಾರ್ ಬಾಗ್ ಶಾಸಕಿ ಬಂದನ ಕುಮಾರಿ ಉಪ ಸ್ಪೀಕರ್ ಆಗಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
೪೬ ವರ್ಷದ ಕೇಜ್ರಿವಾಲ್ ದೆಹಲಿ ನಿವಾಸಿಗಳಿಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೇಡಿಯೋ ಮೂಲಕ ಕರೆ ಕೊಟ್ಟಿದ್ದಾರೆ. ಮೂರು ವರ್ಷದ ಮೊದಲು ಇದೇ ಸ್ಥಳದಲ್ಲಿ ಜನಲೋಕಪಾಲ್ ಜಾರಿ ಮಾಡುವಂತೆ ಧರಣಿ ಕುಳಿತಿದ್ದರು ಅರವಿಂದ್ ಕೇಜ್ರಿವಾಲ್ .
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಹಾಗೂ ದೆಹಲಿಯ ಎಲ್ಲ ೭ ಲೋಕಸಭಾ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಮೋದಿ ಅವರ ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಪ್ರಮಾಣವಚನಕ್ಕೆ ಬರಲಾಗುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


