ಪ್ರಧಾನ ಸುದ್ದಿ

ಬಿಗಡಾಯಿಸಿದ ಸಂಬಂಧದ ನಡುವೆ ಫೆಬ್ರವರಿ ೧೭ ರಂದು ಬಿಜೆಪಿ-ಸೇನಾ ಭೇಟಿ

ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ನಡುವೆ ಬೆಳೆಯುತ್ತಿರುವ ಉದ್ವೇಗದ ನಡುವೆ ಎರಡೂ

ಬಿಗಡಾಯಿಸಿದ ಸಂಬಂಧದ ನಡುವೆ ಫೆಬ್ರವರಿ ೧೭ ರಂದು ಬಿಜೆಪಿ-ಸೇನಾ ಭೇಟಿ
ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ
Published On :

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ನಡುವೆ ಬೆಳೆಯುತ್ತಿರುವ ಉದ್ವೇಗದ ನಡುವೆ ಎರಡೂ ಪಕ್ಷಗಳ ಸಮನ್ವಯ ಸಮಿತಿ ಸಭೆ ಫೆಬ್ರವರಿ ೧೭ರಂದು ನಡೆಯಲಿದೆ.

ಈ ಸಭೆ ಮಧ್ಯಾಹ್ನ ನಡೆಯಲಿದೆ ಎಂದು ಶಿವಸೇನಾ ವಕ್ತಾರ ತಿಳಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯದ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ   ಮತ್ತು ಸಹಕಾರಿ ಸಚಿವ ಚಂದ್ರಕಾಂತ್ ಪಾಟೀಲ್ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ, ಸಾರಿಗೆ ಸಚಿವ ದಿವಾಕರ್ ರಾವೋಟೆ ಮತ್ತು ರಾಜ್ಯ ಸಭಾ ಸದಸ್ಯ ಅನಿಲ್ ದೇಸಾಯಿ ಶಿವಸೇನೆಯನ್ನು ಪ್ರತಿನಿಧಿಸಲಿದ್ದಾರೆ.

ಮೈತ್ರಿ ಸರ್ಕಾರದ ಸರಾಗ ಆಡಳಿತಕ್ಕಾಗಿ ಆ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು. ೧೯೯೫-೧೯೯೯ ರ ನಡುವಿನ, ಈ ಹಿಂದಿನ ಶಿವಸೇನಾ-ಬಿಜೆಪಿ ಸರ್ಕಾರ ಕೂಡ ಸಮನ್ವಯ ಸಮಿತಿ ಹೊಂದಿತ್ತು. ದಿವಂಗತ ಶಿವಸೇನೆಯ ಅಧ್ಯಕ್ಷ ಭಾಳಾ ಠಾಕ್ರೆ ಹಾಗೂ ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಈ ಸಮಿತಿಯಲ್ಲಿದ್ದರು.

ಈ ಕ್ಷಣದಲ್ಲಿ ಈ ಕೇಸರಿ ಪಕ್ಷಗಳ ಸಂಬಂಧ ಬಿಗಡಾಯಿಸಿದೆ. ದೆಹಲಿ ಚುನಾವಣೆಗಳಲ್ಲಿ ಬಿಜೆಪಿ ಸೋತ ನಂತರ ಶಿವಸೇನ ಬಿಜೆಪಿ ಪಕ್ಷವನ್ನು ತೀವ್ರವಾಗಿ ಟೀಕಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.