ಮೈಸೂರು ಅರಮನೆ ಉತ್ತರಾಧಿಕಾರಿಯಾಗಿ ಯದುವೀರ್ ಆಯ್ಕೆ, ಫೆ.23ಕ್ಕೆ ದತ್ತು ಸ್ವೀಕಾರ ಸಮಾರಂಭ
ಮೈಸೂರಿನ ಕೊನೆಯ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ಉದ್ಭವಿಸಿದ್ದ ಉತ್ತರಾಧಿಕಾರಿ ವಿವಾದಕ್ಕೆ ಗುರುವಾರ ತೆರೆ ಬಿದ್ದಿದೆ.

ಮೈಸೂರು: ಮೈಸೂರಿನ ಕೊನೆಯ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ಉದ್ಭವಿಸಿದ್ದ ಉತ್ತರಾಧಿಕಾರಿ ವಿವಾದಕ್ಕೆ ಗುರುವಾರ ತೆರೆ ಬಿದ್ದಿದೆ.
ಈ ಕುರಿತು ಇಂದು ಕುಟುಂಬದ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮಹಾರಾಣಿ ಪ್ರಮೋದಾ ದೇವಿ ಅವರು, ಶ್ರಿಕಂಠದತ್ತ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೇ ಅವರನ್ನು ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಅರಮನೆಯ ಪರಂಪರೆಯಂತೆ ಇದೇ ತಿಂಗಳು 23ಕ್ಕೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದ್ದು, ಅಂದು ಯದುವೀರ್ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಎಂದು ಬದಲಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉತ್ತರಾಧಿಕಾರಿ ನೇಮಕದ ಕುರಿತು ದಾಖಲೆ ಪ್ರದರ್ಶಿಸಿದ ಪ್ರಮೋದಾ ದೇವಿ, ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉತ್ತರಾಧಿಕಾರಿಯಾಗುವವರು ಅರಮನೆ ಪರಂಪರೆ ಬಗ್ಗೆ ತಿಳಿದಿರಬೇಕು ಎಂದರು.
ಫೆ. 21, 22 ಮತ್ತು 23ರಂದು ಅರಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೊದಲ ದಿನವೇ ಯದು ಗೋಪಾಲರಾಜೇ ಅವರನ್ನು ಶುಭಲಗ್ನ 1.20ರಿಂದ 1.30 ವೇಳೆಯ ಒಳಗೆ ದತ್ತು ಸ್ವೀಕಾರ ಮಾಡಲಾಗುತ್ತದೆ. ಅಲ್ಲದೆ ಸಮಾರಂಭದ ಅತಿಥಿಗಳಾಗಿ ಶೃಂಗೇರಿ ಮಠದ ಪೀಠಾಧ್ಯಕ್ಷರು ಸೇರಿದಂತೆ ಇತರೆ ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಅಲಮೇಲಮ್ಮನ ಶಾಪ ಎಂದು ನಂಬಲಾದ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಮೈಸೂರು ರಾಜವಂಶಸ್ಥರ ಒಬ್ಬರಿಗೆ ಮಕ್ಕಳಾದರೆ, ಮತ್ತೊಬ್ಬರಿಗೆ ಮಕ್ಕಳಾಗದ ಸ್ಥಿತಿ ಇದೆ. ಕಳೆದ ವರ್ಷ ಡಿ. 10 ರಂದು ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಇದುವರೆಗೆ ದತ್ತು ಸ್ವೀಕಾರ ನಡೆದಿರಲಿಲ್ಲ. ವಿಜಯ ದಶಮಿಯ ದಿನಗಳಲ್ಲಿ ನಿಯಮದಂತೆ ಪೂಜಾ ವಿಧಿ ವಿಧಾನಗಳು ನಡೆಯಬೇಕಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರಕ್ಕೆ ಪ್ರಮೋದಾದೇವಿ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


