ಬಾಲಚಂದ್ರ ನೆಮಾಡೆ ಪ್ರತಿಕ್ರಿಯೆಗೆ ರಶ್ದಿ ಕೆಂಡಾಮಂಡಲ
ಸದರಿ ಜ್ಞಾನಪೀಠ ಪ್ರಶಸ್ತಿ ವಿಜೇತ ಮಹಾರಾಷ್ಟ್ರದ ಲೇಖಕ ಬಾಲಚಂದ್ರ ನೆಮಾಡೆ ಅವರು ಕಾರ್ಯಕ್ರಮವೊಂದರಲ್ಲಿ

ಮುಂಬೈ: ಸದರಿ ಜ್ಞಾನಪೀಠ ಪ್ರಶಸ್ತಿ ವಿಜೇತ ಮಹಾರಾಷ್ಟ್ರದ ಲೇಖಕ ಬಾಲಚಂದ್ರ ನೆಮಾಡೆ ಅವರು ಕಾರ್ಯಕ್ರಮವೊಂದರಲ್ಲಿ ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ, 'ಮಿಡ್ ನೈಟ್ ಚಿಲ್ಡ್ರನ್ಸ್' ನಂತರ ಬರೆದಿದ್ದು ಯಾವುದೂ ಸಾಹಿತ್ಯಿಕವಾಗಿ ಉತ್ತಮವಾದ ಕೃತಿಯಲ್ಲ ಎಂದಿದ್ದಾರೆ ಅಲ್ಲದೆ ನೊಬೆಲ್ ಪ್ರಶಸ್ತಿ ವಿಜೇತ ವಿ ಎಸ್ ನಾಯ್ಪಾಲ್ ಅವರ ಕೃತಿಗಳು ಪಶ್ಚಿಮದ ದೇಶಗಳಿಗೆ ಬರೆದವು ಎಂದು ಟೀಕಿಸಿದ್ದಾರೆ.
ಇದರಿಂದ ಕುಪಿತಗೊಂಡಿರುವ ಸಲ್ಮಾನ್ ರಶ್ದಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನೇಮಾಡೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೆಮಾಡೆ ಅವರನ್ನು ಮುದುಕ ಬಾಸ್ಟರ್ಡ್ ಎಂದಿರುವ ರಶ್ದಿ, ನನ್ನ ಯಾವುದೇ ಕೃತಿಗಳನ್ನು ಓದದೆ ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿದ್ದಾರೆ.
ಇಂಗ್ಲಿಶ್ ಭಾಷೆಗೆ ಅನಗತ್ಯ ಪ್ರಾಮುಖ್ಯತೆ ಕೊಡುವುದನ್ನು ಟೀಕಿಸಿರುವ ನೆಮಾಡೆ, ಇಂಗ್ಲಿಶ್ ಭಾಷೆಯಲ್ಲಿ ಇಲ್ಲಿಯವರೆಗೂ ಒಂದು ಮಹಾಕಾವ್ಯ ರಚನೆಯಾಗಿಲ್ಲ. ನಮ್ಮ ಮರಾಠಿಯಲ್ಲೇ ಕನಿಷ್ಟ ೧೦ ಮಹಾಭಾರತದ ಮಹಾಕಾವ್ಯಗಳಿವೆ. ಇಂಗ್ಲಿಷನ್ನು ಕಡ್ಡಾಯ ಮಾಡಬೇಡಿ. ಇಂಗ್ಲಿಷ್ ನಿರ್ಮೂಲನೆಯನ್ನು ಕಡ್ಡಾಯ ಮಾಡಿ ಎಂದಿದ್ದಾರೆ.
ನೇಮಾಡೆ ಲೇಖಕರಾಗಿರುವುದಲ್ಲದೆ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಶ್ ಮತ್ತು ತುಲನಾತ್ಮಕ ಭಾಷಾಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ಕೆಲವು ದಿನಗಳ ಹಿಂದೆಯಷ್ಟೇ ೧೧ ಲಕ್ಷ ಮೊತ್ತ ಒಳಗೊಂಡ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


