ಬಿಹಾರ ಮಂತ್ರಿಮಂಡಲ ಸಭೆ ಇಂದು, ವಿಧಾನಸಭೆ ವಿಸರ್ಜನೆ ಶಿಫಾರಸ್ಸಿಗೆ ಮಾಂಝಿ ಸಿದ್ಧ
ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ

ಅಪ್ಡೇಟ್: ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಕರೆದಿದ್ದ ಮಂತ್ರಿಮಂಡಲದ ಸಭೆಯಲ್ಲಿ ೨೮ ಮಂತ್ರಿಗಳಲ್ಲಿ ೭ ಜನ ವಿಧಾನಸಭೆಯ ವಿಸರ್ಜನೆಯನ್ನು ಬೆಂಬಲಿಸಿದ್ದು ಇನ್ನುಳಿದ ನಿತೀಶ್ ಕುಮಾರ್ ಬಣದ ಬೆಂಬಲಿಗರು ಸಭೆಯಿಂದ ಹೊರನಡೆದಿದ್ದಾರೆ. ಇದರ ಹೊರತಾಗಿಯೂ ಮಾಂಝಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಟ್ನಾ: ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಮಂತ್ರಿಮಂಡಲದ ಸಭೆ ಕರೆದಿದ್ದು ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಸಭೆಯನ್ನು ಮಧ್ಯಾಹ್ನ ೨ ಘಂಟೆಗೆ ಕರೆಯಲಾಗಿದೆ.
ಇದಕ್ಕೂ ಮುಂಚೆ ಜೆಡಿಯು ಪಕ್ಷದ ಅಧ್ಯಕ್ಷ ಶರದ್ ಯಾದವ್ ಎಲ್ಲ ಶಾಸಕರ ಸಭೆಯನ್ನು ೪ ಘಂಟೆಗೆ ನಡೆಸುವುದಾಗಿ ಘೋಷಿಸಿದ್ದರು. ಆ ಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಬದಲಿಸಬಹುದೆಂದು ಊಹಿಸಲಾಗಿತ್ತು. ಈಗ ಮುಖ್ಯಮಂತ್ರಿಗಳು ಅದಕ್ಕೂ ಮುಂಚಿತವಾಗಿ ಸಭೆ ಕರೆದಿರುವುದು ರಾಜಕೀಯ ಪಂಡಿತರ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


