ಪ್ರಧಾನ ಸುದ್ದಿ

ಬಿಜೆಪಿಗೆ 100 ಕಾರ್ಪೊರೇಟ್ ದಿಗ್ಗಜರ ಸೇರ್ಪಡೆ

ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ದಿನ ಎಣಿಕೆ ನಡೆಯುತ್ತಿದ್ದಂತೆಯೇ 100 ಕಾರ್ಪೊರೇಟ್...

ಬಿಜೆಪಿಗೆ 100 ಕಾರ್ಪೊರೇಟ್ ದಿಗ್ಗಜರ ಸೇರ್ಪಡೆ
ಅಮಿತ್ ಶಾ
Published On :

ನವದೆಹಲಿ: ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ದಿನ ಎಣಿಕೆ ನಡೆಯುತ್ತಿದ್ದಂತೆಯೇ 100 ಕಾರ್ಪೊರೇಟ್ ದಿಗ್ಗಜರು ಬಿಜೆಪಿಗೆ ಸೇರಿದ್ದಾರೆ.

ಬ್ಯಾಂಕ್ ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಸುಮಾರು 100 ಮಂದಿ ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಯುವ ಮೋರ್ಚಾ ಅಧ್ಯಕ್ಷ ಅನುರಾಗ್ ಠಾಕೂರ್ ಸಮ್ಮುಖದಲ್ಲಿ ಭಾನುವಾರ ಬಿಜೆಪಿಗೆ ಸೇರಿದ್ದಾರೆ.

ಉದ್ಯಮಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿದ ನಂತರ ಮಾತನಾಡಿದ ಅಮಿತ್ ಶಾ, ಬಿಜೆಪಿ  ಕುಟುಂಬಕ್ಕೆ ಸ್ವಾಗತ ಎಂದು ಹೇಳಿದ್ದಾರೆ.

ಲುಫ್ತಾನ್ಸಾದ ಪರ್ವೇಜ್ ಅಲಾಂಗಿರ್ ಖಾನ್, ಕತಾರ್ ಏರ್‌ವೇಸ್‌ನ ದೇಶೀಯ ಮುಖ್ಯಸ್ಥ ಹೆನ್ರಿ ಮೋಸೆಸ್, ಎಟಿಆ್ಯಂಡ್‌ಟಿ ಯ ನೀತಾ ಅಗರ್‌ವಾಲ್, ಅಯಿಕೋನ್ ಗ್ರೂಪ್‌ನ  ಜಗ್‌ಪ್ರೀತ್ ಲಾಂಬಾ, ಕಪಿಲ್ ಕುಮಾರಿಯಾ (ಕಾರ್ಪರೇಟ್ ಅಲಿಯೆನ್ಸ್ ಗ್ರೂಪ್), ಅನಿಲ್ ಪರಾಶರ್ (ಇಂಟರ್‌ಗ್ಲೋಬ್ ಟೆಕ್ನಾಲಜೀಸ್, ಡಾ. ನವೀನ್ ತಲ್ವಾರ್  (ಹಿರಿಯ ಸರ್ಜನ್, ಪೋರ್ಟೀಸ್ ಹಾಸ್ಪಿಟಲ್), ರಾಜೀವ್ ತ್ಯಾಗಿ (ಹಿರಿಯ ನ್ಯಾಯವಾದಿ), ರಾಜೀವ್ ಬಾಂಬ್ರಿ ಮೊದಲಾದವರು ಬಿಜೆಪಿಗೆ ಸೇರಿದ ಗಣ್ಯರಾಗಿದ್ದಾರೆ.

ಬ್ಯಾಂಕ್  ಆಫ್ ಅಮೆರಿಕ, ಹನಿವೆಲ್, ಸ್ಪೈಸ್‌ಜೆಟ್, ಬಾಂಬಾರ್ಡಿಯರ್, ಯುಟಿಸಿ, ಕೆಪಿಎಂಜಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಕೂಡಾ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ.

ಬಿಜೆಪಿಗೆ ಸೇರಿದ ಗಣ್ಯರನ್ನುದ್ದೇಶಿಸಿ ಮಾತನಾಡಿದ ಶಾ, ಕೇಂದ್ರ ಸರ್ಕಾರದ ಹೊಸ ಯೋಜನೆಗಳೊಂದಿಗೆ ಕೈ ಜೋಡಿಸಿ ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಯವನ್ನು ಮಾಡಿ, ದೇಶದ ಪ್ರಗತಿಗೆ ಜತೆಯಾಗಲು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.