ವರ್ಷದ ಭಕ್ತ ಸ್ಥಾನಕ್ಕೆ ಸಖತ್ ಸ್ಪರ್ಧೆ!
2015ಕ್ಕೆ ವಿದಾಯ ಹೇಳುವ ಹೊತ್ತಲ್ಲೇ ಟ್ವಿಟರ್ ನಲ್ಲಿ ಸಂಜೆ ವೇಳೆಗೆ ಈ ಹ್ಯಾಶ್ ಟ್ಯಾಗ್ ನಲ್ಲಿ ಆಸಕ್ತಿಕರ ಸಂಗತಿಗಳ ಚರ್ಚೆಯಾಗಿದೆ. ಅದರಲ್ಲಿ ಒಂದು `ಭಕ್ತ್ ಆಫ್ ದಿ ಇಯರ್' ಯಾರು ಅಂತ!..

ನವದೆಹಲಿ: 2015ಕ್ಕೆ ವಿದಾಯ ಹೇಳುವ ಹೊತ್ತಲ್ಲೇ ಟ್ವಿಟರ್ ನಲ್ಲಿ ಸಂಜೆ ವೇಳೆಗೆ ಈ ಹ್ಯಾಶ್ ಟ್ಯಾಗ್ ನಲ್ಲಿ ಆಸಕ್ತಿಕರ ಸಂಗತಿಗಳ ಚರ್ಚೆಯಾಗಿದೆ. ಅದರಲ್ಲಿ ಒಂದು `ಭಕ್ತ್ ಆಫ್ ದಿ ಇಯರ್' ಯಾರು ಅಂತ!
ಗುರುವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಕುರಿತ ಹಲವಾರು ಚರ್ಚೆಗಳು ನಡೆಯುವ ಹೊತ್ತಲ್ಲೇ, ಸಂಜೆ ವೇಳೆಗೆ ಈ ಹ್ಯಾಶ್ ಟ್ಯಾಗ್ ನಲ್ಲಿ ಆಸಕ್ತಿಕರ ಸಂಗತಿಗಳು ಹೊರಬರಲು ಶುರುವಾಯಿತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಕದನದಂತಾಗಿ, ಆಪ್ ನಾಯಕರನ್ನೂ ಇದರೊಳಗೆ ಎಳೆದುಕೊಂಡು ಬಂದು ಝಾಡಿಸಿದರು. ಕೆಲವರಂತೂ ವರ್ಷದ ಮೋದಿ ಭಕ್ತನಾಗಿ `ಅರವಿಂದ್ ಕೇಜ್ರಿವಾಲ್, ಅನುಪಮ್ ಖೇರ್, ರಜತ್ ಶರ್ಮಾ, ಅರ್ನಾಬ್ ಗೋಸ್ವಾಮಿ, ಸಂಜಯ್ ಜಾ, ಬಾಬಾ ರಾಮ್ದೇವ್, ರವೀನಾ ಟಂಡನ್' ಸೇರಿದಂತೆ ಹಲವರ ಹೆಸರುಗಳನ್ನು ತೇಲಿಬಿಟ್ಟರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದಿನವೂ ಮೋದಿಯನ್ನು ವಿರೋಧಿಸುವ ಸಲುವಾಗಿಯೇ ಅವರ ಹೆಸರನ್ನು ಜಪಿಸುತ್ತಿರುತ್ತಾರೆ, ಹೀಗಾಗಿ ಅವರೇ ನಿಜವಾದ ಭಕ್ತ ಎಂಬ ಸಂಗತಿಗಳು ಉಲ್ಲೇಖವಾದವು. ಆದರೆ ಇವರ ಜತೆಯಲ್ಲೇ ಕಿರಣ್ ಬೇಡಿ ಅವರನ್ನು ಸೇರಿಸಲು ಮರೆಯಲಿಲ್ಲ.
ಅನುಪಮ್ ಖೇರ್ ಗೆ ಬಹುಮತ: ಇನ್ನೂ ವಿಶೇಷವೆಂದರೆ ಅಸಹಿಷ್ಣುತೆ ವಿಚಾರದಲ್ಲಿ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರ ಹೆಸರೇ ಭರ್ಜರಿಯಾಗಿ ತೇಲಿಬಂತು. ವಿಶೇಷವೆಂದರೆ, ವರ್ಷದ ಭಕ್ತನಾಗಿ ಹೆಚ್ಚಿನ ವೋಟು ಸಿಕ್ಕಿದ್ದು ಇವರಿಗೇ. ಅಸಹಿಷ್ಣುತೆ ವಿಚಾರದಿಂದ ಹಿಡಿದು, ಇತ್ತೀಚಿನ ವರೆಗೆ ಮೋದಿ ಕುರಿತು ಖೇರ್ ಆಡಿದ್ದ ಮಾತುಗಳೆಲ್ಲವೂ ಮತ್ತೆ ಜಪಿತವಾದವು. ಸುಬ್ರಮಣಿಯನ್ ಸ್ವಾಮಿ, ಚೇತನ್ ಭಗತ್ ಇರಬಹುದು ಎಂಬ ಬಗ್ಗೆ ವಾದವೂ ಆರಂಭವಾದವು.
ಚೇತನ್ ಭಗತ್‍ಗೆ ಆರ್ಎಸ್‍ಎಸ್ ಉಡುಗೆ ತೊಡಿಸಿ ನಿಲ್ಲಿಸಲಾಯಿತು. ಇನ್ನು ಕಾಂಗ್ರೆಸ್ ನಾಯಕರನ್ನು ಟ್ವಿಟರ್ ನಲ್ಲಿ ಸಮರ್ಥಿಸಿಕೊಳ್ಳುವ ಸಂಜಯ್ ಜಾ ನಿಜವಾದ ಭಕ್ತರಿರಬೇಕು ಎಂದು ಮೋದಿ ಅಭಿಮಾನಿಗಳು ತಿರುಗೇಟು ನೀಡಲು ಶುರು ಮಾಡಿದರು. ಸಂಜಯ್ ಜಾ ಜತೆಗೆ ಸಲ್ಮಾನ್ ಖುರ್ಷಿದ್ ಹೆಸರುಗಳೂ ಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


