ಪ್ರಧಾನ ಸುದ್ದಿ

9 /11 ಉಗ್ರ ದಾಳಿ ನಂತರ ಅಮೆರಿಕಾದಲ್ಲಿ ಸಿಖ್ಖರ ಮೇಲೆ ಹೆಚ್ಚುತ್ತಿರುವ ಹಲ್ಲೆ

9 /11 ಭಯೋತ್ಪಾದಕ ದಾಳಿಯ ನಂತರ ಅಮೆರಿಕದಲ್ಲಿ ಸಿಖ್ ಸಮುದಾಯದವರ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

9 /11 ಉಗ್ರ ದಾಳಿ ನಂತರ ಅಮೆರಿಕಾದಲ್ಲಿ ಸಿಖ್ಖರ ಮೇಲೆ ಹೆಚ್ಚುತ್ತಿರುವ ಹಲ್ಲೆ
9 /11 ಉಗ್ರ ದಾಳಿ ನಂತರ ಅಮೆರಿಕಾದಲ್ಲಿ ಸಿಖ್ಖರ ಮೇಲೆ ಹೆಚ್ಚುತ್ತಿರುವ ಹಲ್ಲೆ
Published On :

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಸಮುದಾಯದ ವ್ಯಕ್ತಿಯ ಮೇಲೆ ನಡೆದ ಹಲ್ಲೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, 9 /11 ಭಯೋತ್ಪಾದಕ ದಾಳಿಯ ನಂತರ ಅಮೆರಿಕದಲ್ಲಿ ಸಿಖ್ ಸಮುದಾಯದವರ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಅಮೆರಿಕದ ಜನತೆ ಸಿಖ್ ಸಮುದಾಯದ ವ್ಯಕ್ತಿಗಳನ್ನು ಮುಸ್ಲಿಮರೆಂದು ತಪ್ಪಾಗಿ ತಿಳಿಯುತ್ತಿರುವುದರ ಪರಿಣಾಮ ಸಿಖ್ಖರ ಮೇಲೆ ನಡೆಯುತ್ತಿರುವ ದಾಳಿಗಳು ಹೆಚ್ಚಾಗುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಇತ್ತೀಚೆಗೆ ಫ್ರೆಸ್ನೊ ಪ್ರದೇಶದಲ್ಲಿ 68 ವರ್ಷ ವಯಸ್ಸಿನ ಅಮ್ರಿಕ್ ಸಿಂಗ್ ಬಾಲ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಖ್ಖರನ್ನು ಮುಸ್ಲಿಮರೆಂದು ತಪ್ಪಾಗಿ ಭಾವಿಸಿ ಈ ರೀತಿಯ ಕೃತ್ಯಗಳು ನಡೆಯುತ್ತಿರುತ್ತವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅನ್ಯರ ಮೇಲಿನ ದ್ವೇಷಕ್ಕೆ ನಾವು ಗುರಿಯಾಗಬೇಕಾಗುತ್ತಿದೆ, 2001 ರ ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿಯಾ ನಂತರ ಸಿಖ್ ಸಮುದಾಯದವರಿಗೆ ಬೆದರಿಕೆ ಹಾಕುವುದು ಹೆಚ್ಚಾಗುತ್ತಿದೆ ಇದು ಕೇವಲ ತಪ್ಪು ಗ್ರಹಿಕೆಯಿಂದ ಮಾತ್ರವಲ್ಲ ಅದಕ್ಕಿಂತಲೂ ಬೇರೆಯದ್ದಾಗಿದೆ ಎಂದು  ಅಮೆರಿಕ ಸಿಖ್ ಸಂಘಟನೆ ಮುಖ್ಯಸ್ಥ ಸಿಮ್ರಾನ್ ಜೀತ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.