ಪ್ರಧಾನ ಸುದ್ದಿ

ಝಾಕೀರ್ ಮಂಗಳೂರು ಪ್ರವೇಶ ನಿರ್ಬಂಧ

ಸೌತ್ ಕರ್ನಾಟಕ ಸಲಾಫಿ ಮೂವ್‍ಮೆಂಟ್ ಸಂಘಟನೆ ಮಂಗಳೂರಿನಲ್ಲಿ ಜ.2ರಂದು ಹಮ್ಮಿಕೊಂಡಿದ್ದ ಡಾ.ಝಾಕೀರ್ ನಾಯಕ್...

ಝಾಕೀರ್ ಮಂಗಳೂರು ಪ್ರವೇಶ ನಿರ್ಬಂಧ
ಡಾ.ಝಾಕೀರ್ ನಾಯಕ್
Published On :
ಮಂಗಳೂರು: ಸೌತ್ ಕರ್ನಾಟಕ ಸಲಾಫಿ ಮೂವ್‍ಮೆಂಟ್ ಸಂಘಟನೆ ಮಂಗಳೂರಿನಲ್ಲಿ ಜ.2ರಂದು ಹಮ್ಮಿಕೊಂಡಿದ್ದ ಡಾ.ಝಾಕೀರ್ ನಾಯಕ್  ಸಾರ್ವಜನಿಕ ಭಾಷಣ, ಅವರ ಮಂಗಳೂರು ಪ್ರವೇಶಕ್ಕೆ ನಗರ ಪೊಲೀಸ್ ಕಮಿಷನರ್ ಡಿ.31ರಿಂದ ಜ.6ರವರೆಗೆ ನಿರ್ಬಂಧ ವಿಧಿಸಿ ಭಾನುವಾರ ಆದೇಶ ಹೊರಡಿಸಿದ್ದಾರೆ. 
ಸಮಾಜದ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಕೆಲವೊಂದು ಅಂಶಗಳನ್ನು ಪರಿಗಣಿಸಿ ದಂಡಪ್ರಕ್ರಿಯೆ ಸಂಹಿತೆ 144ರನ್ವಯ ಡಾ.ಝಾಕೀರ್ ನಾಯಕ್ ಅವರ ಮಂಗಳೂರು ಪ್ರವೇಶ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಭಾಷಣಕ್ಕೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ. 
ಡಾ.ಝಾಕೀರ್ ಅವರು ಭಾಗವ ಹಿಸುವ ಕಾರ್ಯ ಕ್ರಮದಲ್ಲಿ ಅನ್ಯ ಧರ್ಮೀಯರ ಭಾವನೆಗಳನ್ನು ಕೆರಳಿಸುವ ದುರುದ್ದೇಶವಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದ್ದು, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು. 
ಈ ಕಾರ್ಯಕ್ರಮದ ಆಯೋಜಕರು ಪಾಲಿಕೆಯಿಂದ ಅನುಮತಿ ಪಡೆಯುವಾಗ, ಸಿಎಂ, ಗೃಹ ಸಚಿವರನ್ನು ಆಮಂತ್ರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಸಿಎಂ ಶನಿವಾರ ಭೇಟಿ ಮಾಡಿದಾಗ, ಅವರು ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದಿದ್ದಾರೆ. ಸಂಘಟಕರು ಸುಳ್ಳು ಮಾಹಿತಿ ನೀಡಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹಿಂದೂ ಸಮಿತಿ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.