ಪ್ರಧಾನ ಸುದ್ದಿ

ಲೆವಿ ಅಕ್ಕಿ ಸಂಗ್ರಹಿಸಲ್ಲ: ಮಿಲ್ ಮಾಲೀಕರು ನಿರಾಳ

ಈ ವರ್ಷ ಲೇವಿ ಅಕ್ಕಿ ಸಂಗ್ರಹಿಸುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ಲೆವಿ ಅಕ್ಕಿ ಸಂಗ್ರಹಿಸಲ್ಲ: ಮಿಲ್ ಮಾಲೀಕರು ನಿರಾಳ
ಲೇವಿ ಅಕ್ಕಿ ಸಂಗ್ರಹವಿಲ್ಲ (ಸಂಗ್ರಹ ಚಿತ್ರ)
Published On :

ಕೊಪ್ಪಳ: ಈ ವರ್ಷ ಲೇವಿ ಅಕ್ಕಿ ಸಂಗ್ರಹಿಸುವುದಿಲ್ಲ ಎಂದು ಆಹಾರ  ಇಲಾಖೆ ಸ್ಪಷ್ಟಪಡಿಸಿದೆ.

ಅಕ್ಕಿಯ ದರ ಆಕಾಶದೆತ್ತರಕ್ಕೆ ಏರುತ್ತಿರುವ ಸಂದರ್ಭದಲ್ಲಿ ಲೇವಿ ಸಂಗ್ರಹಿಸಿದರೆ ಹೇಗೆಂದು ಚಿಂತೆಗೀಡಾಗಿದ್ದ ಅಕ್ಕಿ ಮಿಲ್‍ಗಳ ಮಾಲೀಕರು ನಿರಾಳವಾಗಿದ್ದಾರೆ.

ಕೇಂದ್ರ ಸರ್ಕಾರವೇ ಲೇವಿ ನಿಗದಿ ಕೈಬಿಟ್ಟಿರುವುದರಿಂದ ರಾಜ್ಯದಲ್ಲಿ ಅದನ್ನು ಸಂಗ್ರಹಿಸುವುದಿಲ್ಲ. ಆದರೆ, ಬೆಂಬಲ ಬೆಲೆ ದರದಲ್ಲೇ ಪ್ರೋತ್ಸಾಹ ಧನವನ್ನೊಳಗೊಂಡು ಬತ್ತ ಖರೀದಿ ಮಾಡಲಾಗು  ತ್ತದೆ ಎಂದು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ. ಬತ್ತ ಮತ್ತು ಅಕ್ಕಿಯ ದರ ಹೆಚ್ಚಳವಾಗುವ ನಿರೀಕ್ಷೆ ಇದೆ. ನೆರೆಯ ತಮಿಳುನಾಡು ಮತ್ತು ಆಂಧ್ರದಲ್ಲಿ ನೆರೆಗೆ ಬೆಳೆ ನಾಶವಾಗಿ ಅಕ್ಕಿಗೆ  ಭಾರಿ ಭೇಡಿಕೆ ಬಂದಿದೆ. ಹೀಗಾಗಿ,ಲೇವಿ ನೀಡುವುದು ಅಸಾಧ್ಯ ಎಂದು ಮಿಲ್ ಮಾಲೀಕರು ಹೇಳಿದ್ದರು.

ಡಿ.29ರಂದು ಕೊಪ್ಪಳ  ಸೇರಿ ವಿವಿಧೆಡೆ ನಡೆಯುವ ಮಿಲ್ ಮಾಲೀಕರ  ಜತೆಗಿನ ಸಭೆ ಬತ್ತ ಖರೀದಿ ಕೇಂದ್ರ ಪ್ರಾರಂಭ ಮಾಡುವ ವಿಚಾರಕ್ಕೆ ಸೀಮಿತವಾಗಿದೆಯೇ ಹೊರತುಲೇವಿ ಸಂಗ್ರಹಕ್ಕಲ್ಲ  ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.