ಪ್ರಧಾನ ಸುದ್ದಿ

ಕಲ್ಲಿದ್ದಲು ಹಗರಣ: ಮಾಜಿ ಪ್ರಧಾನಿ ಸಿಂಗ್ ಪ್ರತ್ಯಕ್ಷದರ್ಶಿಯನ್ನಾಗಿಸುವ ಮನವಿ ತಿರಸ್ಕರಿಸಿದ ಕೋರ್ಟ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರತ್ಯಕ್ಷದರ್ಶಿಯಾಗಿ ಕೋರ್ಟ್ ಗೆ ಹಾಜರುಪಡಿಸಬೆಂದು ಮನವಿ ಮಾಡಿದ್ದ ಜಾರ್ಖಂಡ್ ಇಸ್ಪಾಟ್ ಪ್ರೈ. ಲಿ. ನ(ಜೆ ಐ ಪಿ ಎಲ್)

ಕಲ್ಲಿದ್ದಲು ಹಗರಣ: ಮಾಜಿ ಪ್ರಧಾನಿ ಸಿಂಗ್ ಪ್ರತ್ಯಕ್ಷದರ್ಶಿಯನ್ನಾಗಿಸುವ ಮನವಿ ತಿರಸ್ಕರಿಸಿದ ಕೋರ್ಟ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್
Published On :

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರತ್ಯಕ್ಷದರ್ಶಿಯಾಗಿ ಕೋರ್ಟ್ ಗೆ ಹಾಜರುಪಡಿಸಬೆಂದು ಮನವಿ ಮಾಡಿದ್ದ ಜಾರ್ಖಂಡ್ ಇಸ್ಪಾಟ್ ಪ್ರೈ. ಲಿ. ನ(ಜೆ ಐ ಪಿ ಎಲ್) ನಿರ್ದೇಶಕ ಆರ್ ಎಸ್ ರುಂಗ್ಟ ಅವರ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಕಲ್ಲಿದ್ದಲು ಸಚಿವಾಲಯದಿಂದ ತಂದಿದ್ದ ದಾಖಲೆಗಳ ಸತ್ಯಾಸತ್ಯತೆಯನ್ನು ಧೃಢೀಕರಿಸಲು ಮನಮೋಹನ್ ಸಿಂಗ್ ಅವರನ್ನು ಹಾಜರುಪಡಿಸುವಂತೆ ಕೋರಿದ್ದ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ವಜಾಗೊಳಿಸಿದ್ದಾರೆ.

ಜಾರ್ಖಂಡದ ಉತ್ತರ ಧಾಡು ಕಲ್ಲಿದ್ದಲು ಗಣಿಯನ್ನು ಜೆ ಐ ಪಿ ಎಲ್ ಗೆ, ತಪ್ಪು ಮತ್ತು ನಕಲು ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಎಂಬ ದೂರಿನ ವಿರುದ್ಧ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಆರ್ ಎಸ್ ರುಂಗ್ಟ ಅಲ್ಲದೆ, ಮತ್ತೊಬ್ಬ ನಿರ್ದೇಶಕ ಆರ್ ಸಿ ರುಂಗ್ಟ ಕೂಡ ಈ ಪ್ರಕರಣದಲ್ಲಿ ಆಪಾದಿತರಾಗಿದ್ದರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.