ಬಾಲ ನ್ಯಾಯ ತಿದ್ದುಪಡಿ ಕಾಯ್ದೆ ಅಂಗೀಕಾರ ತೃಪ್ತಿ ತಂದಿದೆ, ಆದರೆ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ: ನಿರ್ಭಯಾ ತಾಯಿ
ಬಾಲಪರಾಧ ನ್ಯಾಯ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ ದೊರೆತದ್ದು ಸಮಾಧಾನ ತಂದಿದೆ. ಆದರೆ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು

Published On :
ನವದೆಹಲಿ: ಬಾಲಪರಾಧ ನ್ಯಾಯ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ ದೊರೆತದ್ದು ಸಮಾಧಾನ ತಂದಿದೆ. ಆದರೆ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು ನಿರ್ಭಯಾ ತಾಯಿ ಆಶಾದೇವಿ ಅವರು ಮಂಗಳವಾರ ಹೇಳಿದ್ದಾರೆ.
ಬಾಲ ನ್ಯಾಯ ತಿದ್ದುಪಡಿ ಕಾಯ್ದೆ ಅಂಗೀಕಾರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಆಶಾದೇವಿ, ವಿಧೇಯಕ ಅಂಗೀಕರಿಸಿದ್ದರಿಂದ ಖುಷಿಯಾಗಿದೆ. ಇದರಿಂದ ನನ್ನ ಮಗಳಿಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ. ಬೆರೆ ಹೆಣ್ಣು ಮಕ್ಕಳಿಗೆ ನ್ಯಾಯ ದೊರೆಯಲಿದೆ ಎಂದರು. ಅಲ್ಲದೆ ವಿಧೇಯ ಅಂಗೀಕಾರಕ್ಕೆ ಸಹಕರಿಸಿದ ಎಲ್ಲ ಪಕ್ಷದವರಿಗೂ ಧನ್ಯವಾದ ಎಂದರು.
ಸುದೀರ್ಘ ಚರ್ಚೆ ಬಳಿಕ ತಿದ್ದುಪಡಿ ಇಂದು ರಾಜ್ಯಸಭೆಯಲ್ಲಿ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಬಳಿಕ ಧ್ವನಿಮತದ ಮೂಲಕ ಅಂಗೀಕರಿಸಲಾತು. ಈ ವೇಳೆ ಕಲಾಪದಲ್ಲಿ ನಿರ್ಭಯಾ ಪೋಷಕರು ಸಹ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


