ಪ್ರಧಾನ ಸುದ್ದಿ

ಅಪರಾಧ ಗೆದ್ದಿತು; ನಾವು ಸೋತೆವು: ನಿರ್ಭಯಾ ಹೆತ್ತವರ ಅಳಲು

ಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ...

ಅಪರಾಧ ಗೆದ್ದಿತು; ನಾವು ಸೋತೆವು: ನಿರ್ಭಯಾ ಹೆತ್ತವರ ಅಳಲು
ನಿರ್ಭಯಾ ಹೆತ್ತವರ ಅಳಲು...
Published On :
ನವದೆಹಲಿ: ``ಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪಿಗೆ ನಿರ್ಭಯಾ ಹೆತ್ತವರು ನೀಡಿದ ನಿರಾಶಾದಾಯಕ ಪ್ರತಿಕ್ರಿಯೆಯಿದು. 
ನಮ್ಮ ಮೂರು ವರ್ಷಗಳ ಹೋರಾಟದ ಹೊರತಾಗಿಯೂ, ನಮ್ಮ ಸರ್ಕಾರ ಮತ್ತು ನ್ಯಾಯಾಲಯವು ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತು. ನಮಗೆ ಖಂಡಿತಾ ನ್ಯಾಯ ಒದಗಿಸಲಾಗುವುದು ಎಂಬ ಆಶ್ವಾಸನೆ ನೀಡಲಾಗಿತ್ತು. ಆದರೆ, ಅದನ್ನು ಪೂರೈಸಲಿಲ್ಲ ಎಂದು ನಿರ್ಭಯಾಳ ತಾಯಿ ಆಶಾದೇವಿ ನೋವು ತೋಡಿಕೊಂಡರು. 
ಕೋರ್ಟ್ ಆದೇಶ ನೀಡುವಾಗ ಸಮಾಜದ ಹಿತದೃಷ್ಟಿ ಬಗ್ಗೆಯಾದರೂ ಯೋಚಿಸಬೇಕಿತ್ತು. ಭವಿಷ್ಯದಲ್ಲಿ ಯಾರೂ ಇಂತಹ ಅಪರಾಧ ಎಸಗದಂತೆ ಕಠಿಣ ನಿಲುವು ತಾಳಬಹುದಿತ್ತು ಎಂದು ನಿರ್ಭಯಾ ತಂದೆ ಹೇಳಿದರು. ಜತೆಗೆ, ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.