ಪ್ರಧಾನ ಸುದ್ದಿ

ಗದ್ದಲದ ನಡುವೆಯೇ ಸುಷ್ಮಾ ಹೇಳಿಕೆ: ಭಾರತ-ಪಾಕ್ ಮಾತುಕತೆ ಬಗ್ಗೆ ವಿವರಣೆ

ಪ್ರಧಾನಿ ನರೇಂದ್ರಮೋದಿ ಅವರು ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆಂಬ ವಿಷಯ ಸಂಸತ್ತಿನ ಉಭಯ...

ಗದ್ದಲದ ನಡುವೆಯೇ ಸುಷ್ಮಾ ಹೇಳಿಕೆ: ಭಾರತ-ಪಾಕ್ ಮಾತುಕತೆ ಬಗ್ಗೆ ವಿವರಣೆ
ಸುಷ್ಮಾ ಸ್ವರಾಜ್
Published On :
ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರು ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆಂಬ ವಿಷಯ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ, ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿ, ಉಭಯ ಸದನಗಳ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು. 
ಪಂಜಾಬ್‍ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರೆ, ಆಪ್ ಸದಸ್ಯರು ದೆಹಲಿಯಲ್ಲಿ ರೈಲ್ವೆಗೆ ಸೇರಿದ ಜಾಗದಲ್ಲಿದ್ದ ಜೋಪಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟಿಸಿದರು. 
ಹೀಗಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ಗೊಂದಲಗಳ ಜತೆ ಘೋಷಣೆಗಳು ಮೊಳಗಿದವು. ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಪಾಕಿಸ್ತಾನ ಭೇಟಿ ಕುರಿತಂತೆ ಸ್ವಯಂ ಹೇಳಿಕೆ ನೀಡಿದರು. 
ಪಾಕಿಸ್ತಾನದ ಜತೆಗಿನ ಹೊಸ ಮಾತುಕತೆಗಳು, ಈ ವಲಯದಲ್ಲಿ ಶಾಂತಿ ಮತ್ತು ಅಬಿsವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಹೊಸ ಆರಂಭದ ಸೂಚನೆಯೆಂದು ನಾವು ಪ್ರಾಮಾಣಿಕವಾಗಿ ನಂಬಿದ್ದೇವೆ ಎಂದು ವಿವರಿಸಿದರು. 
ಯಾರಿಗೂ ಕೇಳಿಸಲಿಲ್ಲ ಸುಷ್ಮಾ ಹೇಳಿಕೆ: ಕಾಂಗ್ರೆಸ್ ಮತ್ತು ಬಿಎಸ್‍ಬಿ ಸದಸ್ಯರು ಪಂಜಾಬ್‍ನ ಅಬೊಹರ್ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ, ಕೈಕಾಲುಗಳನ್ನು ನಿರ್ದಯವಾಗಿ ಕಡಿಯಲಾಗಿದೆ ಎಂದು ಆರೋಪಿಸಿ ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು.
ಪ್ರತಿಭಟನೆಯಿಂದಾಗಿ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ಭೇಟಿ ಕುರಿತ ಹೇಳಿಕೆ ಯಾರಿಗೂ ಕೇಳಿಸದಂತಾಗಿತ್ತು. ಹೀಗಾಗಿ ಕಲಾಪವನ್ನು ಮುಂದೂಡಲಾಯಿತು. ಕಲಾಪ ಆರಂಭವಾದಂತೆ ಪದೇ ಪದೇ ಕಾಂಗ್ರೆಸ್ ಮತ್ತು ಬಿಎಸ್‍ಪಿ ಸದಸ್ಯರು ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. 
ಇದರಿಂದ ಅಸಮಾಧಾನಗೊಂಡ ರಾಜ್ಯಸಭಾ ಉಪಾಧ್ಯಕ್ಷ ಪಿ.ಜೆ.ಕುರಿಯನ್, ನಿಮ್ಮ ನಡವಳಿಕೆ ಸರಿಯಲ್ಲ,  ಜಾಪ್ರಭುತ್ವವಿರೋಧಿ ನಡವಳಿಕೆ, ಕೆಲವೇ ಕೆಲವು ಸದಸ್ಯರು ಇಡೀ ಸದನವನ್ನು ಹಾಳು ಮಾಡುತ್ತಿದ್ದೀರಿ ಎಂದರು. ಗದ್ದಲದ ನಡುವೆ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದರು.
ಕೇರಳ ವಿವಾದ: ಮತ್ತೆ ಮಧ್ಯಾಹ್ನ ಕಲಾಪ ಆರಂಭವಾದಾಗ ಕೇರಳದ ಮುಖ್ಯಮಂತ್ರಿಗೆ ಅವಮಾನ ಮಾಡಿದ ಘಟನೆ ಪ್ರಸ್ತಾಪವಾಗಿ ಕಲಾಪಕ್ಕೆ ಪ್ರತಿಪಕ್ಷಗಳು ಅಡ್ಡಿ ಮಾಡಿದವು. ಕೇರಳ ಮುಖ್ಯಮಂತ್ರಿಯನ್ನು ಸಮಾರಂಭಕ್ಕೆ ಆಹ್ವಾನಿಸದೇ ಅವಮಾನಿಸಿದ ಘಟನೆ ಲೋಕಸಭಾ ಕಲಾಪಕ್ಕೆ ಅಡ್ಡಿಯಾಯಿತು. 
ಸಂಸತ್ತಿನ ಹೊರಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ, ಪ್ರಧಾನಿ ಮೋದಿ ಅವರು ನಮ್ಮ ಕೇರಳ ಮುಖ್ಯಮಂತ್ರಿಗಳನ್ನು ಮಾತ್ರವಲ್ಲ ಇಡೀ ಕೇರಳ ಜನತೆಯನ್ನು ಅವಮಾನಿಸಿದ್ದಾರೆ. ಪ್ರಧಾನಿಗಳು ತಮ್ಮ ಸಂವಿಧಾನಿಕ ಹುದ್ದೆಯನ್ನು ರಾಜಕೀಯ ದ್ವೇಷಕ್ಕಾಗಿ ಬಳಸುತ್ತಿದ್ದಾರೆ ಎಂದೂ ದೂರಿದರು. 
ಸದನದ ಒಳಗೂ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ, ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು. ಸ್ವೀಕರ್ ಮಹಾಜನ್ ಅವರು ಹಲವು ಬಾರಿ ಕಲಾಪ ಮುಂದೂಡಿದರು, ಮತ್ತೆ ಮತ್ತೆ ಕಲಾಪ ಸೇರಿದಂತೆ ಪ್ರತಿಪಕ್ಷಾ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. 
ಸಿಂಗ್ ಸ್ಪಷ್ಟನೆ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರುಕಾಂಗ್ರೆಸ್ ಆರೋಪ ನಿರಾಧಾರವಾದದ್ದು ಎಂದು ತಳ್ಳಿಹಾಕಿದರು. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಆಹ್ವಾನ ವಾಪಸು ಪಡೆಯುವ ನಿರ್ಧಾರ ಕೈಗೊಂಡಿದ್ದು, ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ ಸಂಸ್ಥೆ. 
ಆ ಸಂಸ್ಥೆ ನಿರ್ಧಾರಕ್ಕೂ, ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್, ಈ ಘಟನೆಯಿಂದ ಕೇರಳದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜಕೀಯ ನೈತಿಕತೆಯನ್ನು ಮರೆತ ಗಂಭೀರ ಪ್ರಕರಣ ಇದು, ಕೇಂದ್ರದ ಸರ್ಕಾರದ ರಾಜಕೀಯ ಪ್ರೇರಿತ ನಡೆಯಿಂದಾಗಿ ಚಾಂಡಿ ಅವರಿಗೆ ನೀಡಿದ್ದ ಆಹ್ವಾನ ಹಿಂಪಡೆಯಲಾಗಿದೆ. 
ಇಡೀ ರಾಜ್ಯಕ್ಕೆ ಈ ಘಟನೆ ಆಘಾತವುಂಟು ಮಾಡಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎಂದರು. ಸರ್ಕಾರದ ನಡವಳಿಕೆ ಖಂಡಿಸಿ, ಕಾಂಗ್ರೆಸ್, ಎನ್‍ಸಿಪಿ ಮತ್ತು ಆರ್‍ಜೆಡಿ ಸದಸ್ಯರು ಸಭಾತ್ಯಾಗ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.