ಪ್ರಧಾನ ಸುದ್ದಿ

ಕೇಜ್ರಿವಾಲ್ ಕಾರ್ಯದರ್ಶಿ ನಿವಾಸದಲ್ಲಿ ೨.೪ ಲಕ್ಷ ವಶ: ಸಿಬಿಐ

ಸಿಬಿಐ ಮಂಗಳವಾರ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸುಮಾರು ೧೪ ಕಡೆ ದಾಳಿ ನಡೆಸಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯದರ್ಶಿಯವರ

ಕೇಜ್ರಿವಾಲ್ ಕಾರ್ಯದರ್ಶಿ ನಿವಾಸದಲ್ಲಿ ೨.೪ ಲಕ್ಷ ವಶ: ಸಿಬಿಐ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಸಿಬಿಐ ಮಂಗಳವಾರ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸುಮಾರು ೧೪ ಕಡೆ ದಾಳಿ ನಡೆಸಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯದರ್ಶಿಯವರ ಮನೆಯಲ್ಲಿ ೨.೪ ಲಕ್ಷ ರೂ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.

ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ನಿವಾಸದಿಂದ ಮೂರು ಸ್ಥಿರಾಸ್ತಿಗಳ ಕಡತಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.

ಇದಕ್ಕೂ ಮುಂಚಿತವಾಗಿ ಈ ದಾಳಿಯ ವಿರುದ್ಧ ಹರಿಹಾಯ್ದಿದ್ದ ಕೇಜ್ರಿವಾಲ್ ಇದು ರಾಜಕೀಯ ದ್ವೇಷಕ್ಕಾಗಿ ನಡೆದಿರುವ ಸಂಚು ಎಂದಿದ್ದಲ್ಲದೆ ಮೋದಿ ಅವರು ಹೇಡಿ ಮತ್ತು ಸೈಕೋಪಾತ್ ಎಂದು ಬರೆದಿದ್ದರು.

ತಮ್ಮ ಇಮೇಲ್ ಗಳನ್ನು ತೆರೆದು ತೋರಿಸಲು ಕುಮಾರ್ ಅವರು ಸಹಕರಿಸಿಲ್ಲ ಎಂದು ಕೂಡ ಸಿಬಿಐ ಆರೋಪಿಸಿದೆ.

ಕುಮಾರ್ ಜೊತೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಜಿ ಕೆ ನಂದಾ ಅವರ ಮನೆಯಲ್ಲಿ ೧೦.೫ ಲಕ್ಷ ರೂ ವಶಪಡಿಸಿಕೊಂಡಿರುವುದಾಗಿ ಸಿಬಿಐ ತಿಳಿಸಿದೆ.

ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಟಿಸಿಐಎಲ್) ನಲ್ಲಿ ನಂದಾ ಕಾರ್ಯಕಾರಿ ವ್ಯವಸ್ಥಾಪಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.