ಪ್ರಧಾನ ಸುದ್ದಿ

ಪ್ರವಾಹ ಸಂತ್ರಸ್ತರಿಗೆ ಮೋದಿಯವರಿಂದ ವಿಶೇಷ ಅನುದಾನ ಕೋರಿದ ಜಯಲಲಿತಾ

ತಮಿಳುನಾಡಿನ ಪ್ರವಾಹದಿಂದ ತೊಂದರೆಗೀಡಾಗಿರುವ ಸಂತ್ರಸ್ತರಿಗೆ ಆಶ್ರಯ ಒದಗಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶೇಷ ಅನುದಾನದ

ಪ್ರವಾಹ ಸಂತ್ರಸ್ತರಿಗೆ ಮೋದಿಯವರಿಂದ ವಿಶೇಷ ಅನುದಾನ ಕೋರಿದ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
Published On :

ಚೆನ್ನೈ: ತಮಿಳುನಾಡಿನ ಪ್ರವಾಹದಿಂದ ತೊಂದರೆಗೀಡಾಗಿರುವ ಸಂತ್ರಸ್ತರಿಗೆ ಆಶ್ರಯ ಒದಗಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶೇಷ ಅನುದಾನದ ಬೇಡಿಕೆಯಿಟ್ಟಿದ್ದಾರೆ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ.

ಇದಕ್ಕಾಗಿ ಗೃಹ ನಿರ್ಮಾಣ, ನಗರ ಬಡತನ ನಿರ್ಮೂಲನೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಿಗೆ ಅಗತ್ಯ ಸೂಚನೆ ನೀಡುವಂತೆ ಮೋದಿ ಅವರಿಗೆ ಬರೆದ ಪತ್ರದಲ್ಲಿ ಜಯಲಲಿತಾ ಮನವಿ ಮಾಡಿದ್ದಾರೆ. ಮನೆಗಳಿಗಾಗಿ ರಾಜ್ಯ ನೆಲ ನೀಡುವುದಾಗಿ ಅವರು ತಿಳಿಸಿದ್ದಾರೆ.

ಸ್ಲಂನಲ್ಲಿ ವಾಸಿಸುವ ಜನರಿಗೆ ಪ್ರವಾಹದಿಂದ ಅತಿ ಹೆಚ್ಚು ತೊಂದರೆ ಉಂಟಾಗಿದೆ ಎಂದು ಕೂಡ ಅವರು ತಿಳಿಸಿದ್ದು, ೫೦,೦೦೦ ಮನೆ ನಿರ್ಮಿಸಲು ಕೇಂದ್ರ ಸರ್ಕಾರದ ಅನುದಾನದಲ್ಲಿ ಮನೆಯೊಂದಕ್ಕೆ ೧.೫ ಲಕ್ಷದಂತೆ ೭೫೦ ಕೋಟಿ ಬಿಡುಗಡೆಗೆ ಮನವಿ ಮಾಡಿದ್ದಾರೆ. ಸ್ಲಂ ಗಳಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ರಾಜ್ಯ ಸರ್ಕಾರ ಪ್ರತಿ ಮನೆಗೆ ೧ ಲಕ್ಷ ನೀಡುವುದಾಗಿ ಕೂಡ ಅವರು ತಿಳಿಸಿದ್ದಾರೆ.

ತಿರುವಳ್ಳೂರ್, ಕಡಲೂರ್, ಕಂಚಿಪುರಂ ಮತ್ತು ಟ್ಯೂಟಿಕಾರ್ನ್ ಜಿಲ್ಲೆಗಳಲ್ಲಿ ಸುಮಾರು ೧ ಲಕ್ಷ ಮನೆಗಳು ಮಳೆಯಿಂದಾಗಿ ನಾಶವಾಗಿರುವುದಾಗಿ ತಿಳಿಸಿರುವ ಅವರು ಹೆಚ್ಚುವರಿ ೧ ಲಕ್ಷ ಮನೆ ನಿರ್ಮಿಸಲು ಅನುದಾನ ನೀಡುವಂತೆ ಮೋದಿಯವರಿಗೆ ತಿಳಿಸಿದ್ದಾರೆ. ಇದು ಇಂದಿರಾ ಗಾಂಧಿ ಆವಾಸ್ ಯೋಜನೆಯನ್ನು ಹೊರತುಪಡಿಸಿ ಕೇಳಿರುವ ಹೆಚ್ಚುವರಿ ಬೇಡಿಕೆಯಾಗಿದೆ.

ಇಲ್ಲಿಯವರೆಗೂ ಈ ಪ್ರವಾಹದಿಂದಾಗಿ ೩೪೭ ಜನ ಮೃತಪಟ್ಟಿದ್ದಾರೆ. ಸುಮಾರು ೧೭.೬೪ ಲಕ್ಷ ಜನರನ್ನು ರಕ್ಷಿಸಿ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ.

ಮೋದಿ ಅವರು ಪ್ರವಾಹದ ಪರಿವೀಕ್ಷಣೆ ನಡೆಸಿ ಇಲ್ಲಿಯವರೆಗೆ ಪರಿಹಾರಕ್ಕೆ ೧೯೪೦ ಕೋಟಿ ರೂ ಬಿಡುಗಡೆ ಮಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.