ಅಸಹಿಷ್ಣುತೆ ವೈಭವೀಕರಣ ಸರಿಯಲ್ಲ
ಶಾಂತಿ ತತ್ವಗಳಿಗೆ ಹೆಸರಾದ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿ. ಈ ರಾಷ್ಟ್ರದಲ್ಲಿ ಯಾವುದೇ ಸಂದರ್ಭದಲ್ಲೂ ಅಸಹಿಷ್ಣುತೆ ಭಾವನೆ ತಲೆದೋರಿಲ್ಲ ಎಂದು ಟಿಬೆಟಿಯನ್ನರ ಧರ್ಮಗುರು ದಲೈಲಾಮ..

ಕುಶಾಲನಗರ: ಶಾಂತಿ ತತ್ವಗಳಿಗೆ ಹೆಸರಾದ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿ. ಈ ರಾಷ್ಟ್ರದಲ್ಲಿ ಯಾವುದೇ ಸಂದರ್ಭದಲ್ಲೂ ಅಸಹಿಷ್ಣುತೆ ಭಾವನೆ ತಲೆದೋರಿಲ್ಲ ಎಂದು ಟಿಬೆಟಿಯನ್ನರ ಧರ್ಮಗುರು ದಲೈಲಾಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲ ನಗರದ ಬೈಲಕುಪ್ಪೆಯ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಸೆರಲಾಚಿ ಬೌದ್ಧ ಮಂದಿರದ ಲ್ಲಿ ಭಾನುವಾರ ಮಾತನಾಡಿದ ಅವರು, ಬುದ್ಧ ಜನಿಸಿದ ನಾಡು ಅಹಿಂಸಾಪ್ರಿಯ ದೇಶವಾಗಿದ್ದು ಶಾಂತಿ ಮತ್ತು ನೆಮ್ಮದಿ ಬಾಳ್ವೆಗೆ ಅವಕಾಶ ಕಲ್ಪಿಸಿದೆ. ಅಭಿವೃದ್ಧಿಯತ್ತ ಸಾಗುವಾಗ ವ್ಯತ್ಯಯಗಳು ಸಹಜ. ಇದಕ್ಕೆ ರಾಜಕಾರಣ ಬೆರೆಸುವ ಅಗತ್ಯವಿಲ್ಲ ಹಾಗೂ ಅಸಹಿಷ್ಣುತೆ ಬಗೆಗಿನ ಹೇಳಿಕೆಗಳನ್ನು ಮಾಧ್ಯಮ ಕೂಡ ವೈಭವೀಕರಿಸಬಾರದು ಎಂದು ಕಿವಿಮಾತು ಹೇಳಿದರು.
ಉಗ್ರವಾದದ ಬಗ್ಗೆ ಪ್ರತಿಕ್ರಿಯಿಸುತ್ತಾ,ಇದು ವಿಶ್ವ ವ್ಯಾಪಿಯಾಗಿದ್ದು 21ನೇ ಶತಮಾನದಲ್ಲಿ ಸಂಪೂರ್ಣ ಉಗ್ರವಾದಕ್ಕೆ ವಿರಾಮ ಹಾಕಬೇಕಿದೆ. ಜನರ ಹೃದಯದಲ್ಲಿ ಬದಲಾವಣೆ ಕಾಣಲು ಪ್ರತಿಯೊಬ್ಬರೂ ಪ್ರೀತಿಯ ಮೂಲಕ ಉತ್ತರ ನೀಡಬೇಕಾಗಿದೆ. ಮಾತುಕ-ತೆಯ ಮೂಲಕ ಮಾತ್ರ ಉಗ್ರವಾದಕ್ಕೆ ಪರಿಹಾರ ಹುಡುಕಲು ಸಾಧ್ಯ ಎಂದು ದಲೈಲಾಮ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


