ಪ್ರಧಾನ ಸುದ್ದಿ

'ಹಿಂದೂ ರಾಷ್ಟ್ರವಾದಿ' ಮೋದಿಯಿಂದ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಸಿದ್ಧತೆ: ಇಸ್ಲಾಮಿಕ್ ಸ್ಟೇಟ್

ಶಸ್ತ್ರಾಸ್ತ್ರಗಳನ್ನು ಪೂಜಿಸುವ ಬಲಪಂಥಿಯ ಹಿಂದೂ ರಾಷ್ಟ್ರೀಯವಾದಿ ನರೇಂದ್ರ ಮೋದಿ ಅವರು ತಮ್ಮ ಬದ್ಧ ವೈರಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಜನರನ್ನು...

'ಹಿಂದೂ ರಾಷ್ಟ್ರವಾದಿ' ಮೋದಿಯಿಂದ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಸಿದ್ಧತೆ: ಇಸ್ಲಾಮಿಕ್ ಸ್ಟೇಟ್
ನರೇಂದ್ರ ಮೋದಿ, ಇಸ್ಲಾಮಿಕ್ ಸ್ಟೇಟ್ ಬ್ಲ್ಯಾಕ್ ಫ್ಲಾಗ್ಸ್
Published On :

ನವದೆಹಲಿ: ಶಸ್ತ್ರಾಸ್ತ್ರಗಳನ್ನು ಪೂಜಿಸುವ ಬಲಪಂಥಿಯ ಹಿಂದೂ ರಾಷ್ಟ್ರೀಯವಾದಿ ನರೇಂದ್ರ ಮೋದಿ ಅವರು ತಮ್ಮ ಬದ್ಧ ವೈರಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಜನರನ್ನು ಸಿದ್ಧಗೊಳಿಸುತ್ತಿದ್ದಾರೆ ಎಂದು ಇಸ್ಲಾಮಿಕ್ ಸ್ಟೇಟ್ ತನ್ನ ಬ್ಲ್ಯಾಕ್ ಫ್ಲಾಗ್ಸ್ ಎಂಬ ಕಾರ್ಯಸೂಚಿಯಲ್ಲಿ ಆರೋಪಿಸಿದೆ.

ಇಸ್ಲಾಮಿಕ್ ಸ್ಟೇಟ್ ಬ್ಲ್ಯಾಕ್ ಫ್ಲಾಗ್ಸ್ ಎಂಬ ಕಾರ್ಯಸೂಚಿಯನ್ನು ಇಂಟರ್ನೆಟ್ನಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ  ಈ ಅಂಶವಿದೆ. ಅಲ್ಲದೆ 'ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಇನ್ನು ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನಕ್ಕೆ ತನ್ನ ಕಾರ್ಯಕ್ಷೇತ್ರ ವಿಸ್ತರಿಸಲಿದೆ' ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈಗಾಗಲೇ ಸಿರಿಯಾ ಮತ್ತು ಇರಾಕ್‌ನಲ್ಲಿ ಬೇರೂರಿರುವ ಈ ಉಗ್ರ ಸಂಘಟನೆ, ಇದೇ ಮೊದಲ ಬಾರಿಗೆ  ಭಾರತದಲ್ಲಿನ ಪ್ರಸಕ್ತ ರಾಜಕೀಯ ಸ್ಥಿತಿಗತಿ ಬಗ್ಗೆ ತನ್ನ ಈ ಪ್ರಣಾಳಿಕೆಯಲ್ಲಿ ಪ್ರಸ್ತಾಸಿದೆ.

'ಭಾರತದಲ್ಲಿ ಗೋಮಾಂಸ ತಿನ್ನುವ ಮುಸ್ಲಿಮರನ್ನು ಹತ್ಯೆ ಮಾಡುತ್ತೇವೆ ಎಂದು ಹಿಂದೂಗಳು ಚಳವಳಿ ಆರಂಭಿಸಿದ್ದಾರೆ. ಅಧ್ಯಕ್ಷ (ತಪ್ಪಾಗಿ ಬರೆಯಲಾಗಿದೆ) ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರವಾದಿಯಾಗಿದ್ದು, ಆಯುಧ ಪೂಜಿಸುತ್ತಾರೆ. ಮುಸ್ಲಿಮರ ವಿರುದ್ಧ ಭವಿಷ್ಯದಲ್ಲಿ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ' ಎಂದು ಬರೆಯಲಾಗಿದೆ.

'ಅವರು (ಹಿಂದುಗಳು) ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ರಾಜಕೀಯ ವಿಭಾಗ ಹೊಂದಿದ್ದಾರೆ. ಅದರ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಾರೆ. ಹೀಗೆ ನೇಮಕಗೊಂಡವರಿಗೆ ಶಸ್ತ್ರಾಸ್ತ್ರ ತರಬೇತಿ ಮೂಲಕ ತಮ್ಮ ನಂ.1 ಶತ್ರುಗಳ (ಮುಸ್ಲಿಮರು) ವಿರುದ್ಧ ಸಜ್ಜುಗೊಳಿಸಲಾಗುತ್ತಿದೆ' ಎಂದು ಹೇಳಲಾಗಿದೆ. 'ಪ್ರತಿ ದೇಶದಲ್ಲಿ ನಾವು ಬಂಡೇಳಲಿದ್ದೇವೆ. ವಿಶ್ವದ 150 ಕೋಟಿ ಮುಸ್ಲಿಮರು ಹೊಸ ವಿಶ್ವಕ್ಕಾಗಿ ಪ್ರತಿ ಭೂಮಿ, ಪ್ರತಿ ಸ್ಥಳದಲ್ಲಿ ಹೋರಾಡಲಿದ್ದಾರೆ' ಎಂದು ಐಎಸ್ ಗುಡುಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.