ಪ್ರಧಾನ ಸುದ್ದಿ

ಮತ್ತೆ ಈರುಳ್ಳಿ ಕಳ್ಳರ ಅಟ್ಟಹಾಸ; ನಾಸಿಕ್ ನಲ್ಲಿ ೨೦೦೦ ಕೆಜಿ ಈರುಳ್ಳಿ ಕಳವು

ನೆನ್ನೆ ಮುಂಬೈ ಅಂಗಡಿಯೊಂದರಿಂದ ೭೦೦ ಕೆಜಿ ಈರುಳ್ಳಿ ಕಳವಾದ ಬಳಿಕ ಈಗ ನಾಸಿಕ್ ರೈತನ ದಾಸ್ತಾನಿನಿಂದ ಒಳ್ಳೆಯ ಗುಣಮಟ್ಟದ ೨೦೦೦ ಕೆಜಿ ಈರುಳ್ಳಿ ಕಳವಾದ

ಮತ್ತೆ ಈರುಳ್ಳಿ ಕಳ್ಳರ ಅಟ್ಟಹಾಸ; ನಾಸಿಕ್ ನಲ್ಲಿ ೨೦೦೦ ಕೆಜಿ ಈರುಳ್ಳಿ ಕಳವು
ಈರುಳ್ಳಿ
Published On :
ನಾಸಿಕ್: ನೆನ್ನೆ ಮುಂಬೈ ಅಂಗಡಿಯೊಂದರಿಂದ ೭೦೦ ಕೆಜಿ ಈರುಳ್ಳಿ ಕಳವಾದ ಬಳಿಕ ಈಗ ನಾಸಿಕ್ ರೈತನ ದಾಸ್ತಾನಿನಿಂದ ಒಳ್ಳೆಯ ಗುಣಮಟ್ಟದ ೨೦೦೦ ಕೆಜಿ ಈರುಳ್ಳಿ ಕಳವಾದ ಘಟನೆ ವರದಿಯಾಗಿದೆ. 
ನಂದಗಾವ್ ತಾಲೂಕಿನ ಪೀಪರ್ಖೇಡ್ ಗ್ರಾಮದ ರೈತ ಅಬಾಸಾಹೇಬ್ ಪವಾರ್ ಅವರು ನೆನ್ನೆ ತಮ್ಮ ದಾಸ್ತಾನಿನಲ್ಲಿದ್ದ ೨೦ ಕ್ವಿಂಟಾಲ್ ಈರುಳ್ಳಿ ಕಳವಾಗಿರುವುದಕ್ಕೆ ನಂದಗಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ಏಷ್ಯಾದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಸಾಲ್ಗಾವ್ ನಲ್ಲಿ ಈ ಮಧ್ಯ ಈರುಳ್ಳಿ ಬೆಲೆಯ ಸಗಟು ದರ ಕೆಜಿಗೆ ೫೭ ರೂ ವರೆಗೂ ಏರಿದೆ. ದೆಹಲಿ ಮತ್ತು ಇನ್ನಿತರ ನಗರ ಪ್ರದೇಶಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ೮೦ ರೂ ಮೀರಿದ್ದು, ಗ್ರಾಹಕರಲ್ಲಿ ಕಣ್ಣೀರು ಹೆಚ್ಚಿಸಿದೆ. 
ಸರ್ಕಾರ ತೆಗೆದುಕೊಂಡಿರುವ ಹಲವಾರು ಕ್ರಮಗಳ ಹೊರತಾಗಿಯೂ ಕಳೆದ ಕೆಲವು ವಾರಗಳಿಂದ ಈರುಳ್ಳಿ ಪೂರೈಕೆ ಕ್ಷೀಣಿಸುತ್ತ ಹೋಗಿದ್ದು ಬೆಲೆ ಹೆಚ್ಚುತ್ತಲೇ ಇರುವುದು ಸರ್ಕಾರ ಮತ್ತು ಜನಗಳಲ್ಲಿ ಆತಂಕ ಮೂಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.