ಪ್ರಧಾನ ಸುದ್ದಿ

ಮೋದಿ 'ಪ್ರವಾಸಿ ಪ್ರಧಾನ ಮಂತ್ರಿ': ಖರ್ಗೆ

ಲೋಕಸಭೆಯ ವಿರೋಧ ಪಕ್ಷದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ನರೇಂದ್ರ ಮೋದಿ ಅವರನ್ನು ಅವರನ್ನು 'ಪ್ರವಾಸಿ ಪ್ರಧಾನ ಮಂತ್ರಿ'

ಮೋದಿ 'ಪ್ರವಾಸಿ ಪ್ರಧಾನ ಮಂತ್ರಿ': ಖರ್ಗೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Published On :

ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ನರೇಂದ್ರ ಮೋದಿ ಅವರನ್ನು ಅವರನ್ನು 'ಪ್ರವಾಸಿ ಪ್ರಧಾನ ಮಂತ್ರಿ' ಎಂದು ಕರೆದಿದ್ದು ಅವರಿಗೆ ವಿದೇಶಗಳಲ್ಲಿ ಭಾಷಣ ಮಾಡಲು ಸಮಯವಿದೆ ಆದರೆ ಲೋಕಸಭೆಯಲ್ಲಿ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಮೋದಿ ಅವರು ೨೫ ದೇಶಗಳ ಪ್ರವಾಸ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿ, ಲೋಕಸಭೆಗೂ ಭೇಟಿ ನೀಡುವಂತೆ ಕುಹಕವಾಡಿದ್ದಾರೆ. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ 'ಒನ್ ಮ್ಯಾನ್ ಶೋ' ಎಂದು ಕೂಡ ಅವರು ಹೇಳಿದ್ದಾರೆ.

"ನಿಯಮ ೫೬ ಅಡಿ ನಿಲುವಳಿ ಮಂಡಿಸಿದಾಗ ಪ್ರಧಾನಿ ಸದನಲ್ಲಿರಲಿಲ್ಲ. ಅವರ ಕಚೇರಿಯಲ್ಲಿದ್ದರು ಆದರೆ ಬರಲಿಲ್ಲ; ಇದೇ ರೀತಿ ಪ್ರಮುಖ ವಿಚಾರಗಳು ಚರ್ಚೆಯಾದಾಗ, ಅವರು ಇರಲಿಲ್ಲ, ವಿಪಕ್ಷಗಳು ಸದನ ಬಹಿಷ್ಕರಿಸಿದಾಗ ಇದಕ್ಕೆ ಪರಿಹಾರ ಕಂಡುಹಿಡಯಲು ವಿಪಕ್ಷಗಳನ್ನು ಭೇಟಿ ಮಾಡಲಿಲ್ಲ" ಎಂದು ಖರ್ಗೆ ವರದಿಗಾರರಿಗೆ ತಿಳಿಸಿದ್ದಾರೆ.

"ತಮ್ಮ ಸಚಿವರ ವಿರುದ್ಧ ಆರೋಪಗಳನ್ನು ಚರ್ಚಿಸುವಾಗ ಸದನಲ್ಲಿ ಅವರು ಇರುವುದಿಲ್ಲ, ಆದರೆ ಆಸ್ಟ್ರೇಲಿಯಾ, ಅಮೇರಿಕ ಮ್ಯಾಡಿಸನ್ ವೃತ್ತದಲ್ಲಿ ಮಾತನಾಡುತ್ತಾರೆ. ದುಬೈಗೆ ಭೇಟಿ ನೀಡಿ ಅಲ್ಲಿ ಮೈದಾನದಲ್ಲಿ ಘಂಟೆಗಟ್ಟಲೆ ಭಾಷಣ ಮಾಡುತ್ತಾರೆ...

ಅವರು ಪ್ರವಾಸಿ ಸಚಿವ, ಪ್ರವಾಸಿ ಪ್ರಧಾನ ಮಂತ್ರಿ; ಒಂದುವರ್ಷ ಮತ್ತು ನಾಲ್ಕೂವರೆ ತಿಂಗಳುಗಳಲ್ಲಿ ಅವರು ೨೫ ದೇಶಗಳ ಪ್ರವಾಸ ಕೈಗೊಂಡಿದ್ದಾರೆ, ಬೇರೆ ಯಾವುದಾದರೂ ಪ್ರಧಾನ ಮಂತ್ರಿ ಹೀಗೆ ಮಾಡಿದ್ದಿದೆಯೇ? " ಎಂದಿದ್ದಾರೆ.

ಮೋದಿ ಅವರು ಸರ್ವಾಧಿಕಾರಿಯಾಗುವತ್ತ ಹೆಜ್ಜೆ ಇಟಿದ್ದಾರೆಯೇ ಎಂಬ ಪ್ರಶ್ನೆಗೆ "ನಾನು ಅವರ ಗುಣಗಳನ್ನೆಲ್ಲಾ ತಿಳಿಸಿದ್ದೇನೆ ಈಗ ನೀವೆ ಕಂಡುಹಿಡಿಯಿರಿ" ಎಂದು ಉತ್ತರಿಸಿದ್ದಾರೆ.

ಎಫ್ ಟಿ ಐ ಐ ನಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿರುವುದನ್ನು ಕೂಡ ಖರ್ಗೆ ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.