ಆಗರ್ಭ ಶ್ರೀಮಂತೆಯರು ಶಾಸಕರ ಈ ಪತ್ನಿಯರು
ಬಿಬಿಎಂಪಿ ಚುನಾವಣೆಗೆ ಶಾಸಕರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಮತ್ತೊಂದು ದರ್ಜೆಯ ಅಧಿಕಾರವನ್ನು ಮನೆಯಲ್ಲೇ ಉಳಿಸಿಕೊಳ್ಳಲು ಬಯಸಿದ್ದಾರೆ...

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಶಾಸಕರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಮತ್ತೊಂದು ದರ್ಜೆಯ ಅಧಿಕಾರವನ್ನು ಮನೆಯಲ್ಲೇ ಉಳಿಸಿಕೊಳ್ಳಲು ಬಯಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲಕ್ಕಿಂತ ಮುಂದು. ಜೆಡಿಎಸ್ ನ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪತ್ನಿ ಕ್ರಿಯಾ ಶೈಲಜಾ ಅವರನ್ನು ಹಾಗೂ ಮಹಾಲಕ್ಷ್ಮಿ
ಬಡಾವಣೆ ಶಾಸಕ ಗೋಪಾಲಯ್ಯ ಅವರು ಪತ್ನಿ ಎಚ್ .ಪಿ. ಹೇಮಲತಾ ಅವರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯ ಎಸ್.ಆರ್. ವಿಶ್ವನಾಥ್ ಅವರು ಪತ್ನಿ ವಾಣಿಶ್ರೀ ಅವರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‍ನ ಆರ್ .ವಿ. ದೇವರಾಜ್ ಅವರು ಪುತ್ರ ಯುವರಾಜನಿಗೆ ಕಾರ್ಪೊರೇಟರ್ ಪಟ್ಟ ಕಟ್ಟಲು ಹೊರಟಿದ್ದಾರೆ.
ಇವರೆಲ್ಲರೂ ಕೋಟ್ಯಾಧಿಪತಿಗಳೇ ಎಂಬುದು ಇನ್ನೊಂದು ವಿಶೇಷ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪತ್ನಿ ವಾಣಿಶ್ರೀ ವಿಶ್ವನಾಥ್ ಈ `ಪತ್ನಿಯರ ಸವಾಲಿ'ನಲ್ಲಿ ಆರ್ಥಿಕವಾಗಿ ಸಾಕಷ್ಟು ಮುಂದಿದ್ದಾರೆ. ವೈಯಕ್ತಿಕವಾಗಿ ಅವರಲ್ಲೇ ಕೋಟ್ಯಂತರ ಮೌಲ್ಯದ ನಗದು, ಆಸ್ತಿ ಇದೆ. ಶಾಸಕರಾಗಿರುವ ಪತಿ ವಿಶ್ವನಾಥ್ ಅವರ ಆಸ್ತಿಯನ್ನೂ ಸೇರಿಸಲಾಗಿ ಇವರ ಕುಟುಂಬದ ಆಸ್ತಿ-ಪಾಸ್ತಿ ಮೌಲ್ಯ ರು.25 ಕೋಟಿ ಮೀರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


