ಪ್ರಧಾನ ಸುದ್ದಿ

ನಿಮ್ಮ ಆಯ್ಕೆ ಉಗ್ರವಾದವೋ, ಮಾನವತೆಯೋ: ಮೋದಿ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸದ ಕೊನೆಯ ದಿನವಾದ ಸೋಮವಾರ ಇಲ್ಲಿನ ದುಬೈ ಕ್ರಿಕೆಟ್ ಸ್ಟೇಡಿಯಂ...

ನಿಮ್ಮ ಆಯ್ಕೆ ಉಗ್ರವಾದವೋ, ಮಾನವತೆಯೋ: ಮೋದಿ ಪ್ರಶ್ನೆ
ನರೇಂದ್ರ ಮೋದಿ
Published On :

ಮಸ್ದಾರ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸದ ಕೊನೆಯ ದಿನವಾದ ಸೋಮವಾರ ಇಲ್ಲಿನ ದುಬೈ ಕ್ರಿಕೆಟ್ ಸ್ಟೇಡಿಯಂ ಮತ್ತೊಂದು ಮಾ್ಯಡಿಸನ್ ಸ್ಕ್ವೇರ್ ಆಗಿ ಪರಿವರ್ತನೆಗೊಂಡಿತು.

ಪ್ರಧಾನಿ ಮೋದಿ ಅವರ ಭಾಷಣ ಕೇಳಲೆಂದು 50 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರು ಸ್ಟೇಡಿಯಂನತ್ತ ಹರಿದುಬಂದಿದ್ದರು. ಪ್ರಧಾನಿ ಸ್ಟೇಡಿಯಂನೊಳಕ್ಕೆ ಆಗಮಿಸುತ್ತಿದ್ದಂತೆ `ಮರ್‍ಹಬಾ ಮೋದಿ'- (ಮೋದಿಯವರಿಗೆ ಸ್ವಾಗತ) ಎಂಬ ಘೋಷಣೆಗಳೇ ಕೇಳಿಬಂದವು.

ಮೊದಲು ಭಾರತದ ಪ್ರತಿಯೊಂದು ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಪ್ರಧಾನಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಪಕ್ಷಗಳ ವಿರುದ್ಧ ದಾಳಿ:
ಪ್ರಧಾನಿ ಮತ್ತೊಮ್ಮೆ ವಿದೇಶಿ ನೆಲದಲ್ಲಿ ಭಾರತದ ಹಿಂದಿನ ಸರ್ಕಾರಗಳನ್ನು ಟೀಕಿಸುವ  ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾ-  ಗಿ-ದ್ದಾರೆ. ``ನನ್ನ ಸರ್ಕಾರ ಹಿಂದಿನ  ತಲೆಮಾರಿನಿಂದಾಗಿ ಹಲವು ಸಮಸ್ಯೆಗಳನ್ನು  ಎದುರಿಸುತ್ತಿದೆ. ಹಿಂದಿನ ಸರ್ಕಾರದ ಸ್ಥಿರ  ನಿರ್ಧಾರ ಕೈಗೊಳ್ಳಲಾಗದ ಪ್ರವೃತ್ತಿ ಮತ್ತು  ಆಲಸ್ಯದಿಂದಾಗಿ ನಿಂತು ಹೋಗಿರುವ ಯೋಜನೆಗಳನ್ನು ಮತ್ತೆ ಆರಂಭಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ'' ಎಂಬ ಮೋದಿ  ಹೇಳಿಕೆಯಿಂದ ಕಾಂಗ್ರೆಸ್ ಕೆಂಡಾಮಂಡಲವಾಗಿ  ದೆ. ``ವಿದೇಶಿ ನೆಲದಲ್ಲೂ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಹೇಳಿಕೆ ನೀಡಿರುವುದು ಅಸಹ್ಯಕರ. ಇದು ಭಾರತಕ್ಕೆ ದೊಡ್ಡ ಮುಜುಗರ'' ಎಂದಿದೆ. 

ಸ್ವಯಂಚಾಲಿತ ಕಾರಲ್ಲಿ ಪ್ರಯಾಣ: ಸೋಮವಾರ ಇಂಗಾಲ ಮುಕ್ತ ಸ್ಮಾರ್ಟ್ ಸಿಟಿ ಮಸ್ದಾರ್‍ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಖಾಸಗಿ ಕ್ಷಿಪ್ರ ಸಾರಿಗೆಯಾದ  ಸ್ವಯಂಚಾಲಿತ ಕಾರಿನಲ್ಲಿ ಪ್ರಯಾಣಿಸಿ- ದರು. ಈ ಕಾರು ಸೌರಶಕ್ತಿಚಾಲಿತ ಲೀಥಿಯಂ ಬ್ಯಾಟರಿ ಮೂಲಕ ಸಂಚರಿಸುತ್ತದೆ. ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  ಕಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಭಾರತಕ್ಕೆ ಯುಎಇ ಬೆಂಬಲ ಸೂಚಿಸಿದೆ.

ಮೋದಿ ಭಾಷಣದ ತುಣುಕುಗಳು

  •  ಇಂದು ದುಬೈನಲ್ಲಿ ನಾನು ಮಿನಿ ಭಾರತವನ್ನು ನೋಡುತ್ತಿದ್ದೇನೆ
  •  ಹಲವು ವರ್ಷಗಳಿಂದ ನೀವಿಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೀರಿ. ಈ ಮೂಲಕ ಭಾರತದ ಗೌರವವನ್ನು ವರ್„ಸುತ್ತಿದ್ದೀರಿ
  •  ಭಾರತದ ಖಜಾನೆಯನ್ನು ತುಂಬುವು- ದರಲ್ಲಿ ನಿಮ್ಮ ಕೊಡುಗೆ ಅಪಾರ
  •  ಭಾರತದಲ್ಲಿ ಮಳೆ ಸುರಿಯತೊಡಗಿ-  ದರೆ, ದುಬೈನಲ್ಲಿರುವ ಭಾರತೀಯರು ತಮ್ಮ ಕೊಡೆಗಳನ್ನು ಬಿಡಿಸುತ್ತಾರೆ.
  •  ಭಾರತ ಮತ್ತು ದುಬೈ ನಡುವೆ 700 ವಿಮಾನಗಳು ಸಂಚರಿಸುತ್ತವೆ. ಆದರೆ,  ಭಾರತದ ಪ್ರಧಾನಿಯೊಬ್ಬರಿಗೆ ಇಲ್ಲಿಗೆ  ಬರಲು 34 ವರ್ಷಗಳೇ ಬೇಕಾದವು
  •  ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲು ಇಲ್ಲಿನ ಸರ್ಕಾರ ಭೂಮಿ  ನೀಡುತ್ತಿದೆ. ಇದಕ್ಕಾಗಿ ಎಲ್ಲರೂ  ಎದ್ದುನಿಂತು ಇಲ್ಲಿನ ದೊರೆಗೆ ಧನ್ಯವಾದ ಹೇಳಬೇಕು
  •   ಯುಎಇ ದೊರೆಯು ಭಾರತದಲ್ಲಿ  ರು.4.5 ಲಕ್ಷ ಕೋಟಿ ಹೂಡಿಕೆಗೆ  ನಿರ್ಧರಿಸಿದ್ದಾರೆ
  • ಯಾರು ಭೋತ್ಪಾದನೆಯಲ್ಲಿ ತೊಡಗಿದ್ದಾರೋ ಅವರಿಗೆ ಶಿಕ್ಷೆಯಾಗಲೇಬೇಕು. ಇದು  ಇಲ್ಲಿಂದಲೇ ನಾವು ಅವರಿಗೆ ಕಳುಹಿಸುವ ಸ್ಪಷ್ಟ ಸಂದೇಶ
  • ನಾವು 40 ವರ್ಷಗಳಿಂದಲೂ ಉಗ್ರವಾದದ ಬಲಿಪಶುಗಳು. ಒಳ್ಳೆಯ ತಾಲಿಬಾನ್, ಕೆಟ್ಟ ತಾಲಿಬಾನ್, ಒಳ್ಳೆಯ ಉಗ್ರವಾದ,  ಕೆಟ್ಟ ಉಗ್ರವಾದ... ಇದ್ಯಾವುದೂ ನಡೆಯದು. ನೀವು ಭೋತ್ಪಾದನೆಯ ಜೊತೆಗಿದ್ದೀರೋ, ಮಾನವತೆಯ ಜತೆಗಿದ್ದೀರೋ ಎಂಬುದನ್ನು ನಿರ್ಧರಿಸಿ. ಯಾರು
  • ಎರಡನೆಯದ್ದನ್ನು ಆಯ್ಕೆ ಮಾಡಿ ಕೊಳ್ಳುವರೋ ಅವರೆಲ್ಲರೂ ಒಂದಾಗಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.