ಪ್ರಧಾನ ಸುದ್ದಿ

ವ್ಯಾಪಂ ಹಗರಣ: ೭೬ನೇ ಎಫ್ ಐ ಆರ್ ದಾಖಲು ಮಾಡಿದ ಸಿಬಿಐ

ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.

ವ್ಯಾಪಂ ಹಗರಣ: ೭೬ನೇ ಎಫ್ ಐ ಆರ್ ದಾಖಲು ಮಾಡಿದ ಸಿಬಿಐ
ವ್ಯಾಪಂ ಹಗರಣದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ)
Published On :

ನವದೆಹಲಿ: ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.

ವ್ಯಾಪಂ ನಡೆಸಿದ್ದ ೨೦೧೩ ರ ಪೊಲೀಸ್ ಕಾಂಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ತಪ್ಪೆಸಗಿದ್ದಾರೆ ಎಂದು ಆರೋಪಿಸಲಾಗಿರುವ ೮ ಜನರ ವಿರುದ್ದ ಈ ಹೊಸ ಅಫ್ ಐ ಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ವ್ಯಾಪಂ ವಿರುದ್ಧ ಈಗಾಗಲೇ ೭೪ ಎಫ್ ಐ ಆರ್ ದಾಖಲಿಸಿರುವ ಸಿಬಿಐ, ೧೨ ಪ್ರಾಥಮಿಕ ತನಿಖೆಗಳನ್ನು ಕೂಡ ಪ್ರಾರಂಭಿಸಿದೆ.

ಜುಲೈ ೯ ರಂದು ಸುಪ್ರೀಮ್ ಕೋರ್ಟ್ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಈ ಹಗರಣಕ್ಕೆ ಸಂಬಂಧಪಟ್ಟ ೪೦ ಜನರು ನಿಗೂಢವಾಗಿ ಸಾವನ್ನಪ್ಪಿದ್ದು ದೇಶವನ್ನು ಬೆಚ್ಚಿ ಬೀಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.