ಪ್ರಧಾನ ಸುದ್ದಿ

ನಮ್ಮ ಹಿತಾಸಕ್ತಿಗಾಗಿ ಉತ್ತಮ ಬಾಂಧವ್ಯ ಅಗತ್ಯ: ನವಾಜ್ ಶರೀಫ್

೬೯ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಕಿಸ್ತಾನ ಪ್ರಧಾನಿ ಭಾರತಕ್ಕೆ ಶುಭ ಸಂದೇಶ ನೀಡಿದ್ದು, "ಎರಡು ದೇಶಗಳ ನಡುವಿನ ಒಳ್ಳೆಯ ಬಾಂಧವ್ಯ"

ನಮ್ಮ ಹಿತಾಸಕ್ತಿಗಾಗಿ ಉತ್ತಮ ಬಾಂಧವ್ಯ ಅಗತ್ಯ: ನವಾಜ್ ಶರೀಫ್
ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್
Published On :

ಇಸ್ಲಾಮಾಬಾದ್: ೬೯ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಭಾರತಕ್ಕೆ ಶುಭ ಸಂದೇಶ ನೀಡಿದ್ದು, "ಎರಡು ದೇಶಗಳ ನಡುವಿನ ಒಳ್ಳೆಯ ಬಾಂಧವ್ಯ" ನವದೆಹಲಿ ಮತ್ತು ಇಸ್ಲಾಮಾಬಾದ್ ಗೆ ಸಹಕಾರಿ ಎಂದಿದ್ದಾರೆ.

"ಮಾತುಕತೆಯ ಮೂಲಕ ಎರಡು ದೇಶಗಳ ಪರಸ್ಪರ ಭಿನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನಾವು ಸಂಪೂರ್ಣ ಭರವಸೆ ಇಟ್ಟಿದ್ದೇವೆ" ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

"ಎರಡು ದೇಶಗಳ ಪರಸ್ಪರ ಹಿತಾಸಕ್ತಿಗಾಗಿ ಒಳ್ಳೆಯ ಸಂಬಂಧ ಮತ್ತು ಉತ್ತಮ ಗೆಳೆತನ ಇರಬೇಕು" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರಪತಿ ಮಮ್ನೂನ್ ಹುಸೇನ್ ಕೂಡ ಈ ಸಂದರ್ಭದಲ್ಲಿ ಭಾರತಕ್ಕೆ ಶುಭ ಸಂದೇಶ ನೀಡಿದ್ದಾರೆ. ಇಂದು ಭಾರತ ೬೯ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ನೆನ್ನೆ ಪಾಕಿಸ್ತಾನ ಕೂಡ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿತ್ತು. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.