ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ಬಂಧನ
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ತೆರಳುತ್ತಿದ್ದ ಸಮಯದಲ್ಲಿ ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ನನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಪ್ರತಿಭಟನೆಯ
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ತೆರಳುತ್ತಿದ್ದ ಸಮಯದಲ್ಲಿ ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ನನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಪ್ರತಿಭಟನೆಯ ಸಮಯದಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಕ್ಕೆ ಪುಲ್ವಾಮಾ ಜಿಲ್ಲೆಯಲ್ಲಿ ಯುವಕನೊಬ್ಬ ಮರಣಹೊಂದಿದ್ದ.
ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆ ಕೆ ಎಲ್ ಎಫ್) ಅಧ್ಯಕ್ಷ ಮತ್ತು ಇತರ ಕಾರ್ಯಕರ್ತರನ್ನು ಶ್ರೀನಗರದಿಂದ ನಾಲ್ಕು ಕಿಮೀ ದೂರದಲ್ಲಿರುವ ಪಾಂಡ್ರೆಥಾನ್ ನಲ್ಲಿ ಬಂಧಿಸಲಾಗಿದೆ.
ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾಕರನ್ನು ಭದ್ರತಾ ಪಡೆಗಳು ಇತ್ತೀಚೆಗಷ್ಟೇ ಹತ್ಯೆಗೈದಿದ್ದವು. ಇದರ ವಿರುದ್ಧ ಪ್ರತಿಭಟನೆಗಿಳಿದಿದ್ದ ಯುವಕರ ಮೇಲೆ ಗುಂಡು ಹಾರಿಸಿದ್ದರಿಂದ ಪುಲ್ವಾಮದ ಪದ್ಗಂಪೋರ ಗ್ರಾಮದಲ್ಲಿ ಬಿಲಾಲ್ ಅಹ್ಮದ್ ಭಟ್ (೨೩) ಎಂಬ ಯುವಕ ಮೃತಪಟ್ಟಿದ್ದ.
ಹತನಾದ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಲು ಜೆ ಕೆ ಎಲ್ ಅಫ್ ಮುಖಂಡ ಹೊರಟಿದ್ದರು ಎಂದು ಪಕ್ಷ ತಿಳಿಸಿದೆ.
ಯುವಕನ ಸಾವಿನ ವಿರುದ್ಧ ಪ್ರತಿಭಟಿಸಲು ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ಬಂಧ್ ಗಾಗಿ ಮಲಿಕ್ ಕರೆ ನೀಡಿದ್ದ. ಈಗ ಅವರನ್ನು ನಗರದ ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

